ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭ

0

ಇಂದು ಜಾತ್ರೋತ್ಸವ ಪ್ರಯುಕ್ತ ಗೊನೆಮುಹೂರ್ತ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಬಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.24 ರಂದು ಆರಂಭಗೊಂಡಿದ್ದು, ಜ.31 ರವರೆಗೆ ನಡೆಯಲಿದೆ.

ಇಂದು ಬೆಳಿಗ್ಗೆ ಜಾತ್ರೋತ್ಸವ ಪ್ರಯುಕ್ತ ಗೊನೆ ಮುಹೂರ್ತ ನಡೆಯಿತು. ಬಳಿಕ 12 ತೆಂಗಿನಕಾಯಿ ಗಣಪತಿ ಹವನ, ಏಕಾದಶ ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಿತು.
ರಾತ್ರಿ ಶ್ರೀ ಸದಾಶಿವ ಮಹಾಗಣಪತಿ ದೇವರಿಗೆ ಸಾರ್ವಜನಿಕ ರಂಗಪೂಜೆ ಮತ್ತು ಭಜನಾ ಸೇವೆ ನಡೆಯಲಿದೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕ್ಷೇತ್ರದ ಅಡಳಿತಾಧಿಕಾರಿ ಅಜ್ಜಯ್ಯ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಜೋಗಿಮೂಲೆ, ಅನ್ನಪೂರ್ಣ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆ, ಭಜನಾ ಮಂಡಳಿ ಅಧ್ಯಕ್ಷ ರಾಜೇಶ ಮಾಸ್ತರ್ ರೆಂಜಾಳ, ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನ, ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ಹಾಗೂ ದೇವಳದ ವಿವಿಧ ಸಮಿತಿ, ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


ಜಾತ್ರೋತ್ಸವ ಸಂದರ್ಭದಲ್ಲಿ ರಂಗಪೂಜೆ ಮಾಡಲಿಚ್ಚಿಸುವವರು ಸಂಜೆ 7 ಗಂಟೆ ಮೊದಲು ದೇವಾಲಯದಲ್ಲಿ ಉಪಸ್ಥಿತರಿರಬೇಕೆಂದು ವಿನಂತಿಸಿದ್ದಾರೆ.