ಕರಿಂಬಿಲ: ವಿಶೇಷಚೇತನ ಶಾಲೆಗೆ ಪಂಚಶ್ರೀ ಪಂಜ ಸ್ಪೋಟ್ಸ್ ಕ್ಲಬ್ ವತಿಯಿಂದ ಸಹಾಯಧನ ಹಸ್ತಾಂತರ

0

ಶಾಲೆಗೆ ಉಚಿತ ಅಂಬ್ಯುಲೆನ್ಸ್ ಸೇವೆ ಆಶ್ವಾಸನೆ

ಕ್ರೀಡೆಗೂ ಬದ್ಧ ಸಮಾಜಸೇವೆಗೂ ಸಿದ್ಧ ಎಂಬ ದ್ಯೇಯ ವಾಕ್ಯದೊಂದಿಗೆ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜ.25 ರಂದು ಎಡಮಂಗಲ ಕರಿಂಬಿಲ ವಸಂತರತ್ನ ವಿಶೇಷ ಚೇತನರ ವಸತಿ ಶಾಲೆಗೆ ಸಹಾಯಧನ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಡಮಂಗಲ ಕರಿಂಬಿಲ ವಸಂತರತ್ನ ವಿಶೇಷಚೇತನರ ಶಾಲೆಯ ಅಧ್ಯಕ್ಷ ಬಾಲಕೃಷ್ಣ ಗೌಡ ಬೊಳಿಯೂರು ಕರಿಂಬಿಲ ಮಾತನಾಡಿ “14 ವಿಶೇಷಚೇತನ ಮಕ್ಕಳಿದ್ದು ಇನ್ನೂ ಹೆಚ್ಚಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಬೇಕು”. ಎಂದು ಹೇಳಿದರು,


ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಿತೇಶ್ ಪಂಜದಬೈಲು ಇವರು ಸಹಾಯಧನ ಹಸ್ತಾಂತರಿಸಿದರು.ಹಾಗೂ ಕ್ಲಬ್ ವತಿಯಿಂದ ಈ ವಸತಿ ಶಾಲೆಯ ಮಕ್ಕಳಿಗೆ ಕ್ಲಬ್ ವತಿಯಿಂದ ತುರ್ತು ಆರೋಗ್ಯ ಸೇವೆಗೆ ಪಂಚಶ್ರೀ ಜೀವರಕ್ಷಕ ಅಂಬ್ಯುಲೆನ್ಸ್ ಸೇವೆಯನ್ನು ಉಚಿತ ನೀಡುವುದಾಗಿ ಆಶ್ವಾಸನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವಸತಿ ಶಾಲೆಯ ಶಿಕ್ಷಕ ವೃಂದ , ಟ್ರಸ್ಟಿಗಳು, ವಸತಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನವೀನ್ ನಾಗತೀರ್ಥ ಇವರು ಸ್ವಾಗತಿಸಿದರು, ಶಶಿ ದಾಸ್ ನಾಗತೀರ್ಥ ವಂದಿಸಿದರು ಹಾಗೂ ಚೇತನ್ ಜಳಕದಹೊಳೆ ನಿರೂಪಿಸಿದರು .