ಮುಡ್ನೂರು ಮರ್ಕಂಜ ಶಾಲೆಯಲ್ಲಿ ಶೌಚಾಲಯಕ್ಕೆ ಗುದ್ದಲಿ ಪೂಜೆ

0

ಸ ಹಿ ಪ್ರ ಶಾಲೆ ಮುಡ್ನೂರು ಮರ್ಕಂಜ ಶಾಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ಹೊಸೋಳಿಕೆ ನೆರವೇರಿಸಿದರು.


ಉಪಾಧ್ಯಕ್ಷೆ ಸಂಧ್ಯಾ ಸೇವಾಜೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಗೋವಿಂದ ಅಳುವುಪರೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ದೇವರಾಜ್ ಎಸ್ ಕೆ ಅಭಿನಂದನೆ ಸಲ್ಲಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಎ ಕೆ ಶಾಲಾ ಅಭಿವೃದ್ಧಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಕುಮಾರಿ ಹಾಗೂ
ಸದಸ್ಯರಾದ ಜಯಪ್ರಕಾಶ್. ಆನಂದ ಕೆ ., ರಮೇಶ್, ಪೂರ್ಣಿಮಾ, ಚಿತ್ರಕುಮಾರಿ, ಅಶ್ವಿನಿ, ಚಂದ್ರಶೇಖರ್, ಪವಿತ್ರ, ಭವಾನಿ ಹಾಗೂ ಇತರ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ನಳಿಯಾರ್ ಧನ್ಯವಾದ ಸಮರ್ಪಿಸಿದರು.