ನಾಟಿ ವೈದ್ಯ ಜನಾರ್ದನ ಪಾಲ್ತಾಡು ನೇಣು ಬಿಗಿದು ಆತ್ಮಹತ್ಯೆ

0

ಹರಿಹರ ಪಳ್ಳತಡ್ಕ ಗ್ರಾಮದ ನಾಟಿ ವೈದ್ಯ ಜನಾರ್ದನ ಪಾಲ್ತಾಡು ಸ್ವಗೃಹದಲ್ಲಿ ಜ.26 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ 72 ವರ್ಷ ವಯಸ್ಸಾಗಿತ್ತು


ಇವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಅರಕ್ಷಕ ಠಾಣೆಯ ಎಸ್ ಐ ಕಾರ್ತಿಕ್ ಸ್ಥಳ ಮಹಜರು ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.

ಮೃತರು ಪತ್ನಿ ಯಮುನ, ಪುತ್ರಿಯರಾದ ರೇಖಾ,ರಮ್ಯ,ರಂಜಿತ,ಧರಣಿ ಪುತ್ರ ಕಾರ್ತಿಕ್, ಸಹೋದರ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.