ಕುರುಂಜಿ ತರವಾಡು ದೈವಗಳ ನಡಾವಳಿಯು ಜ.25 ಮತ್ತು 26ರಂದು ಸುಳ್ಯದ ಕುರುಂಜಿ ದೈವಸ್ಥಾನದಲ್ಲಿ ನಡೆಯಿತು.
ಜ.25ರಂದು ಬೆಳಗ್ಗೆ ಗಣಹೋಮ, ನಾಗತಂಬಿಲ, ಹರಿಸೇವೆ ನಡೆಯಿತು. ಸಂಜೆ ಕಾರ್ನೂರು, ದ್ಯಾವತೆ ದೈವ, ಪಿಲಿಚಾಮುಂಡಿ ದೈವ, ಮರಳು ಭೂತ, ಪೊಟ್ಟ ದೈವ, ವರ್ಣರ ಪಂಜುರ್ಲಿ ಮತ್ತು ಕುಪ್ಪೆ ಪಂಜುರ್ಲಿ ದೈವ ನಡಾವಳಿ ನಡೆಯಿತು.
ಜ.26ರಂದು ಬೆಳಗ್ಗೆ ಧರ್ಮದೈವ (ರುದ್ರ ಚಾಮುಂಡಿ) ವಿಷ್ಣುಮೂರ್ತಿ ಮತ್ತು ಪಾಷಾಣಮೂರ್ತಿ ದೈವಗಳು ನಡೆಯುತ್ತಿದೆ.
ಮಧ್ಯಾಹ್ನ ಹರಿಕೆ, ಪ್ರಸಾದ ವಿತರಣೆ ಮತ್ತು ಸಮಾರಾಧನೆ ನಡೆಯಲಿದೆ.
ಮಧ್ಯಾಹ್ನ ಬಳಿಕ ಅಂಗಾರ ಬಾಕುಡ ದೈವ,ಗುಳಿಗ ದೈವದ ಕೋಲ ನಡೆಯಲಿದೆ.