ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ

0

ನಿವೃತ್ತ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ. ಕೆ. ಆರ್ನೂಜಿ ರವರಿಗೆ ಸನ್ಮಾನ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75 ನೇ ಗಣರಾಜ್ಯೋತ್ಸವ ಜ.26 ರಂದು ಆಚರಿಸಲಾಯಿತು. ನಿವೃತ್ತ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ ಕೆ ಆರ್ನೂಜಿ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರಿಗೆ ಸಂಘದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಂಘದ ನಿಕಟಪೂರ್ವಾಧ್ಯಕ್ಷ ಗಣೇಶ್ ಪೈ ರವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಉಪಕಾರ್ಯನಿರ್ವಹಣಾಧಿರಿ ಲೋಹೀತ್ ಎಣ್ಣೆಮಜಲು ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಸಿಬ್ಬಂದಿ ಸುದೀಪ್ ರೈ ವಂದಿಸಿದರು.



ಸಂಘದ ನೂತನ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಸುಬ್ರಹ್ಮಣ್ಯ ಕುಳ, ಚಿನ್ನಪ್ಪ ಗೌಡ ಚೊಟ್ಟೆಮಜಲು,
ಸದಾನಂದ ಕಾರ್ಜ, ವಾಸುದೇವ ಕೆರೆಕ್ಕೋಡಿ , ಅರುಣ್ ರೈ ಗೆಜ್ಜೆ, ಮುದರ ಐವತ್ತೊಕ್ಲು, ವಾಚಣ್ಣ ಕೆರೆಮೂಲೆ ,ಲಿಗೋಧರ ಆಚಾರ್ಯ ಎನ್ ನಾಯರ್ ಕೆರೆ, ತಿಮ್ಮಪ್ಪ ಗೌಡ ಕೂತ್ಕುಂಜ , ಶ್ರೀಮತಿ ವನಿತಾ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ , ನಿಕಟ ಪೂರ್ವ ನಿರ್ದೇಶಕರಾದ ರಘುನಾಥ ರೈ ಕೆರೆಕ್ಕೋಡಿ, ಶ್ರೀಮತಿ ಹೇಮಲತಾ ಚಿದ್ಗಲ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ, ಸಂಘದ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.