ಆಲೆಟ್ಟಿ: ದಿ. ಕುರಿಂಜ ನಾರಾಯಣ ಮಣಿಯಾಣಿ ಶ್ರದ್ಧಾಂಜಲಿ ಸಭೆ – ನುಡಿನಮನ ಸಲ್ಲಿಕೆ

0

ಆಲೆಟ್ಟಿ ಗ್ರಾಮದ ಪ್ರಗತಿಪರ ಕೃಷಿಕರೂ, ಕುರಿಂಜ ತರವಾಡು ಮನೆಯ ಮುಖ್ಯಸ್ಥರಾದ ದಿ. ಕುರಿಂಜ ನಾರಾಯಣ ಮಣಿಯಾಣಿ ಅವರ ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಮೃತರ ಆಲೆಟ್ಟಿ ಮನೆಯಲ್ಲಿ ಜ.26ರಂದು ಮಧ್ಯಾಹ್ನ ಜರುಗಿತು.

ಯಾದವ ಸಭಾ ಸುಳ್ಯ ತಾಲೂಕು ಸಮಿತಿ ನಿಕಟಪೂರ್ವ ಅಧ್ಯಕ್ಷ ಕಣಕ್ಕೂರು ಕೊರಗಪ್ಪ ಮಾಸ್ತರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ ಹಾಗೂ ರತ್ನಾಕರ ಗೌಡ ಕುಡೆಕಲ್ಲು ಅವರು ಮೃತರ ಕುರಿತಂತೆ ಮಾತನಾಡಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಸೀತಮ್ಮ ಆಲೆಟ್ಟಿ, ಪುತ್ರರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಂದರ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಪುತ್ರಿಯರಾದ ಶ್ರೀಮತಿ ಇಂದಿರಾ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಲೀಲಾವತಿ, ಶ್ರೀಮತಿ ರಾಜೀವಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು , ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.