ಜ.28 ರಿಂದ ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಅನಿರ್ದಿಷ್ಟವಾಧಿ ಮುಷ್ಕರ

0

ಸುಳ್ಯದಲ್ಲೂ ಅಂಗನವಾಡಿಗಳು ಬಂದ್

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಠ ವೇತನ ಹಾಗೂ ಸೇವೆ ಕಾಯಂಗಾಗಿ ಬೆಂಗಳೂರಿನಲ್ಲಿ ಜ.28ರಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸುಳ್ಯ ತಾಲೂಕಿನಲ್ಲಿಯೂ ಅಂಗನವಾಡಿ ಕೇಂದ್ರಗಳು ಬಂದ್ ಆಗಲಿದೆ.

ಸುಳ್ಯ ತಾಲೂಕಿನಿಂದ ಸುಮಾರು ನೂರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಲ್ಲಿದ್ದು, ಜ. 28 ಮಂಗಳವಾರದಿಂದ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷೆ, ಸುಳ್ಯ ತಾಲೂಕು ಅಧ್ಯಕ್ಷೆ ಲತಾ ಅಂಬೆಕಲ್ಲು ಸುದ್ದಿಗೆ ತಿಳಿಸಿದ್ದಾರೆ.