ಅರಂತೋಡು: ಮಿಥುನ್ ಕೆ.ಎಸ್ ಕಲ್ಲುಗದ್ದೆ ನಿಧನ

0

ಅರಂತೋಡು ಗ್ರಾಮದ ಕಲ್ಲುಗದ್ದೆ ದಿ.ಸಂಕಪ್ಪ ಗೌಡ ರವರ ಪುತ್ರ ಮಿಥುನ್ ಕೆ.ಎಸ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 27 ವರ್ಷ ವಯಸ್ಸಾಗಿತ್ತು.

ಮೃತ ಯುವಕನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಳಗ್ಗೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಕರೆ ತಂದುದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ಮೃತ ಪಟ್ಟಿರುವುದಾಗಿ
ತಿಳಿದು ಬಂದಿದೆ.


ಮೃತರು ತಾಯಿ ಶ್ರೀಮತಿ ವಾರಿಜಾ, ಸಹೋದರಿ ಶ್ರೀಮತಿ ಭವ್ಯಶ್ರೀ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಯುವಕ
ಸುಳ್ಯದ ಆಯಶ್ಯಿಲ್ಪ ಇಂಜಿನಿಯರಿಂಗ್
ವರ್ಕ್ಸ್ ನಲ್ಲಿ ಉದ್ಯೋಗಿಯಾಗಿದ್ದು ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದರೆಂದು ತಿಳಿದು ಬಂದಿದೆ.