ಸುಳ್ಯದಿಂದ ಕಾಣೆಯಾಗಿದ್ದ ಅಡೂರಿನ ಮಹಿಳೆ ಕೇರಳದಲ್ಲಿ ಪತ್ತೆ- ಸುಳ್ಯಕ್ಕೆ ಕರೆತಂದ ಪೊಲೀಸರು

0

ಸುಳ್ಯದಿಂದ ಕಾಣೆಯಾಗಿದ್ದ ಅಡೂರಿನ ಮಹಿಳೆ ಕೆರಳದಲ್ಲಿ ಪತ್ತೆಯಾಗಿದ್ದು, ಸುಳ್ಯ ಪೊಲೀಸರು ಆ ಮಹಿಳೆಯನ್ನು ಪತ್ತೆ ಹಚ್ಚಿ ಸುಳ್ಯಕ್ಕೆ ಕರೆತಂದಿದ್ದಾರೆ.
ಸುಳ್ಯದ ಖಾಸಗಿ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಆಹಾರ ತಯಾರಿಕಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಒಂದು ತಿಂಗಳ ಹಿಂದೆ ಸುಳ್ಯದಿಂದ ಕಾಣೆಯಾಗಿದ್ದರು.


ಈ ಬಗ್ಗೆ ಮಹಿಳೆಯ ಮನೆಯವರು ಸುಳ್ಯ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಸುಳ್ಯ ಪೊಲೀಸರು ಕಾಣೆಯಾಗಿದ್ದ ಮಹಿಳೆ ಅಶ್ವಿನಿ ಎಂಬುವವರನ್ನು ಕೇರಳದ ಕೊಟ್ಟಾಯಂ ಪರಿಸರದಲ್ಲಿ ಪತ್ತೆ ಹಚ್ಚಿ ಸುಳ್ಯಕ್ಕೆ ಕರೆ ತಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಎ ಎಸ್ ಐ ಉದಯ ಕುಮಾರ್ ಭಟ್, ಪಿ ಸಿ ದಿನೇಶ್, ಮಹಿಳಾ ಪಿ ಸಿ ಪದ್ಮಾವತಿ ಪಾಲ್ಗೊಂಡಿದ್ದರು.