

ದಾನಿಗಳ ಸಹಕಾರದಿಂದ ಬಳ್ಪ ಶಾಲೆಯ ಮಕ್ಕಳಿಗೆ ವಿಶೇಷ ಸಹಜ ಕೃಷಿ ಕಾರ್ಯಕ್ರಮವನ್ನು ಅಗ್ರಿಕಲ್ಚರ್ ಡೆಸ್ಕ್ , ಪಂಜ ಲಯನ್ಸ್ ಕ್ಲಬ್ , ಜೆಸಿ ಪಂಜ ಪಂಚಶ್ರೀ ವತಿಯಿಂದ ಕೈಗೊಳ್ಳಲಾಯಿತು.

ಮಕ್ಕಳಿಗೆ ನಾಟಿ ಬೆಂಡೆ ಕಾಯಿ ಬೀಜ ಕೊಟ್ಟು ಸಹಜ ಕೃಷಿ ಪುಸ್ತಕ ಗಳನ್ನು ನೀಡಿ ಕೃಷಿ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಯಪ್ರಕಾಶ್ ಕೂಜುಗೋಡು , ತುಳಸಿ ದಯಪ್ರಸಾದ್ ಚೀಮುಳ್ಳು ಭಾಗವಹಿಸಿದ್ದರು. ಶಾಲೆಯ 80 ಮಕ್ಕಳಲ್ಲಿ ಹೆಚ್ಚಿನವರು ಬೆಂಡೆಕಾಯಿ ಸಾವಯವ ಕೃಷಿಯನ್ನು ಹೆತ್ತವರ ಸಹಕಾರದಿಂದ ಮಾಡಿದ್ದಾರೆ.


