ವೈಭವದ ಶ್ರೀ ದೇವರ ಪಟ್ಟಣ ಸವಾರಿ – ಕಟ್ಟೆ ಪೂಜೆ
ಇಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಫೆ.15 ರಂದು ರಾತ್ರಿ ಪಟ್ಟಣ ಸವಾರಿ ನಡೆಯಿತು.

ದೇವಸ್ಥಾನದಲ್ಲಿ ಶ್ರೀ ಭೂತಬಲಿ,ಸೇವೆ ಸುತ್ತು ನಡೆದ ಬಳಿಕ ದೇವರ ಪಟ್ಟಣ ಸವಾರಿ ನಡೆಯಿತು.
ಬೆಳ್ಳಾರೆ ಪೇಟೆಯ ಮಾಸ್ತಿಕಟ್ಟೆವರೆಗೆ ಶ್ರೀ ದೇವರ ಪೇಟೆ ಸವಾರಿ ನಡೆದು ಕಟ್ಟೆಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆಗಳು ನಡೆದವು.
ಕಟ್ಟೆಗಳನ್ನು ವಿಶೇಷವಾಗಿ ಹೂ,ತಳಿರು ತೋರಣ,ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.

ಭಕ್ತಾದಿಗಳಿಗೆ ಪಂಚಕಜ್ಜಾಯ,ಪಾನಕ,ಹಾಗೂ ಲಘು ಉಪಾಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.
ಬಸ್ ನಿಲ್ದಾಣ ಸಮೀಪ ಅಂಧರ ಗೀತ ಗಾಯನ ಕಲಾ ಸಂಘ ಮಂಗಳೂರು ಇವರಿಂದ ಗೀತ ಗಾಯನ ನಡೆಯಿತು.
ಹಲವಾರು ಜನ ಭಕ್ತಾದಿಗಳು ಗೀತ ಗಾಯನವನ್ನು ವೀಕ್ಷಿಸಿದರು.
ದೇವರ ಪಟ್ಟಣ ಸವಾರಿ ನಡೆದ ಬಳಿಕ ದೇವಸ್ಥಾನದ ಎದುರಗಡೆ ಆಕರ್ಷಕ ಸುಡು ಮದ್ದಿನ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಹಾಗೂ ಸದಸ್ಯರು ,ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ
ಇಂದು ಬೆಳಿಗ್ಗೆ ಕವಾಟೋದ್ಘಾಟನೆ,ತೈಲಾಭ್ಯಂಜನ,ಉಷಾಪೂಜೆ,ಅವಭೃತ ಸ್ನಾನ,ದರ್ಶನ ಬಲಿ,ರಾಜಾಂಗಣ ಪ್ರಸಾದ,ಬಟ್ಟಲು ಕಾಣಿಕೆ ನಂತರ ಧ್ವಜಾವರೋಹಣ ನಡೆಯಲಿದೆ.



ಬಳಿಕ ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ,ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಅಗ್ನಿ ಗುಳಿಗ ದೈವದ ಭಂಡಾರ ತೆಗೆಯುವುದು,ಭೂತಕೋಲ,ಬಟ್ಟಲು ಕಾಣಿಕೆ ನಡೆಯಲಿದೆ.