ಕೆ.ವಿ.ಜಿ ದಂತ ಮಹಾವಿದ್ಯಾಲಯದ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಕರ ದಿನಾಚರಣೆಯನ್ನು ಹಾಗೂ ಬಾಯಿಯ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ಮತ್ತು ತಡೆಗಟ್ಟುವ ವಿಧಾನದ ಮಾಹಿತಿ ನೀಡುವ ಕಾರ್ಯಕ್ರಮವನ್ನು ಫೆ.13ರಂದು ಆಯೋಜಿಸಲಾಯಿತು.
ಇದರ ಜೊತೆಗೆ ಖ್ಯಾತ ಹಲ್ಲಿನ ಇಂಪ್ಲಾ0ಟ್ ತಜ್ಞರಾದ ಡಾ. ದೀಪಕ್ ಶಿವರವರ ಮಾರ್ಗದರ್ಶನದಲ್ಲಿ “Adjuvant Surgical Procedures in implantology”ಯ ಬಗ್ಗೆ ವಿಚಾರ ಸಂಕೀರ್ಣ ನಡೆಸಲಾಯಿತು. ಇಂಪ್ಲಾAಟ್ ಮೂಲಕ ಹಲ್ಲಿನ ಜೋಡಣೆಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆಯನ್ನು ನೀಡಿದರು.
ಕಾರ್ಯಕ್ರಮವನ್ನು ಕೆ.ವಿ.ಜಿ ದಂತವೈದ್ಯಕೀಯ ಕಾಲೇಜಿನ ಸಿ.ಇ.ಒ ಡಾ. ಉಜ್ವಲ್ ಯು.ಜೆರವರು ಉದ್ಘಾಟಿಸಿ ಕ್ಯಾನ್ಸರ್ ಅರಿವಿನ ಬಗ್ಗೆ ವಿದ್ಯಾರ್ಥಿಗಳಿಂದ ನಿರ್ಮಿಸಲಾದ ಕಿರುಚಿತ್ರ ಸುರುಳಿಯನ್ನು ಶ್ಲಾಘಿಸಿದರು. ಹಾಗೆಯೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಿದರು.
ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ್ ಡಿ. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ. ಮಹಾಬಲೇಶ್ವರ್ ಸಿ.ಹೆಚ್. ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್‌ರವರು ಈ ದಿನದ ಮಹತ್ವ ಮತ್ತು ಆಧುನಿಕ ಮುಖದ ಸೌಂದರ್ಯವರ್ಧಕ ಚಿಕಿತ್ಸಾ ವಿಧಾನದ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ವಿಚಾರ ಸಂಕೀರ್ಣದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾಲೇಜಿನ ಸ್ನಾತ್ತಕೋತ್ತರ ವಿಭಾಗದ ನಿರ್ದೇಶಕರಾದ ಡಾ. ಶರತ್ ಕುಮಾರ್ ಶೆಟ್ಟಿ ಮಾತನಾಡಿದರು. ಡಾ. ರಚನಾ ಪಿ.ಬಿ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಡಾ. ದಿಬಾಕರ್ ಸೂತ್ರಧಾರ್ ವಂದಿಸಿದರು. ಡಾ. ಸಂದೀಪ್ ಬಿ.ಎಸ್. ಉಪಸ್ಥಿತರಿದ್ದರು.
ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನಾತಕೊತ್ತರ ವಿದ್ಯಾರ್ಥಿಗಳು ಹಾಗೂ ಗೃಹವಂತ ವೈದ್ಯರು ಸೇರಿದಂತೆ ೧೫೦ ಕ್ಕೂ ಮಿಕ್ಕಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.