ಆಸಕ್ತ ಕಲಾವಿದರಿಗೆ ಆಹ್ವಾನ

0

ಸುಳ್ಯದಲ್ಲಿ ಕಲಾತ್ಮಕ ಚಿತ್ರದ ಚಿತ್ರೀಕರಣ

   ಸುಳ್ಯ ತಾಲೂಕಿನ ಆಸುಪಾಸಿನಲ್ಲಿ ಹೊಸ ಕಲಾತ್ಮಕ ಚಲನಚಿತ್ರದ ಶೂಟಿಂಗ್  ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನ ಭವಿಷ್ಯ ಸಿನೆಮಾಸ್ ನವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೇ ಹೆಚ್ಚು ಅವಕಾಶ ನೀಡಲಿದ್ದಾರೆ.
ಸುಳ್ಯ ತಾಲೂಕಿನ ಸುತ್ತಮುತ್ತಲಿನ  ಹಳ್ಳಿಗಳಲ್ಲಿ ಇದರ ಚಿತ್ರೀಕರಣವು ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿದ್ದು ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಇರುವ 25 ರಿಂದ 60 ವರ್ಷದೊಳಗಿನ ಕಲಾವಿದರು 99805 16609 ಅಥವಾ 7483953979 ಈ ನಂಬರಿನ ವಾಟ್ಸಪ್ ಗೆ  ಮೇಕಪ್ ರಹಿತವಾದ ಸಹಜ ಅಭಿನಯದಿಂದ ಕೂಡಿದ  ತಮ್ಮ ಎರಡು ಅಥವಾ ಮೂರು ವೀಡಿಯೋ ತುಣುಕುಗಳು ಮತ್ತು ಇತ್ತೀಚಿನ ಭಾವಚಿತ್ರವನ್ನು ದಿನಾಂಕ  20-02-2025 ರೊಳಗೆ  ಕಳುಹಿಸಿಕೊಡಬೇಕು. 

ಆಯ್ಕೆಯಾದವರಿಗೆ ಅಂತಿಮ ಸುತ್ತಿನ ಸಂದರ್ಶನವನ್ನು ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಮಾಡಲಾಗುವುದೆಂದೂ, ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದೆಂದು ಚಿತ್ರ ನಿರ್ದೇಶಕರಾದ ಅನುಪಮ ಶರಧಿ ,ಬೆಂಗಳೂರು ಇವರು ತಿಳಿಸಿದ್ದಾರೆ.

ಉತ್ತಮ ಕತೆ, ಉತ್ಸಾಹಿ ತಂಡ

 ಕತೆ ಬಹಳ ಸ್ವಾರಸ್ಯಕರವಾಗಿದೆ. ರಾಷ್ಟ್ರಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಯೂ ಈ ಚಿತ್ರ ಕತೆಗಿದೆ. 

ಈಗಾಗಲೇ ಮೊದಲ ಸುತ್ತಿನ ಸಂದರ್ಶನ ರಂಗಮನೆಯಲ್ಲಿ ಮುಗಿದಿದ್ದು ಇನ್ನಷ್ಟು ಹೆಚ್ಚಿನ ಕಲಾವಿದರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

  • ಡಾ| ಜೀವನ್ ರಾಂ ಸುಳ್ಯ