ಕೆಪಿಸಿಸಿಗೆ ಸತ್ಯಾಂಶ ತಿಳಿಸಲು ಪೋಸ್ಟ್ ಕಾರ್ಡ್ ಚಳುವಳಿ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಗಿ ರಾಧಾಕೃಷ್ಣ ಬೊಳ್ಳೂರು ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ನೇಮಕ ಗೊಳಿಸಿ ಆದೇಶ ಮಾಡಿರುವುದನ್ನು ಅರಗಿಸಿ ಕೊಳ್ಳದ,ಪಕ್ಷದ ಸಂಘಟನೆಯಲ್ಲಿ ಇರದ ಬೆರೆಳೆಣಿಕೆಯ ನಾಯಕರು ಇದೀಗ ಸುಳ್ಳು ಆರೋಪ ಮಾಡಿ ತಡೆ ತಂದಿರೋದು ಖಂಡನೀಯ ಎಂದು ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದು ಇವರಿಗೆ ಪಕ್ಷ ಉಳಿಸುವ ಕಾರ್ಯ ಅಗತ್ಯ ಇಲ್ಲ, ಇದರ ಸತ್ಯಾಂಶ ತಿಳಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಸುಳ್ಯದ ಸತ್ಯಾಂಶ ತಿಳಿಸುವ ಉದ್ದೇಶದಿಂದ ಕಾರ್ಯಕರ್ತರಿಂದ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಗುವುದೆಂದು ಸಚಿನ್ ತಿಳಿಸಿದ್ದಾರೆ


