ಸಂಪಾಜೆಯಲ್ಲಿ ಶ್ರೀ ಅರೆಕಲ್ಲು ಅಯ್ಯಪ್ಪ ದೇವಸ್ಥಾನದ ಪರಿವಾರ ದೈವದ ಶ್ರೀ ನೈದಪಾಂಡಿ ಕೋಟದ (ಗುಡಿ)ಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.೨೦ ಮತ್ತು ಫೆ.೨೧ರಂದು ನಡೆಯಿತು.

ಫೆ. ೨೦ರಂದು ಸಂಜೆ ೬ಕ್ಕೆ ಪರೋಹಿತ ಶ್ರೀ ಕೃಷ್ಣ ಭಟ್ ಅರಂಬೂರು ಇವರ ಆಗಮನ. ನಂತರ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಸ್ಥಳ ಸುದ್ಧಿ, ಪುಣ್ಯಾಹ ವಾಚನ, ವಾಸ್ತುಪೂಜೆ, ವಾಸ್ತು ಬಲಿ, ರಕ್ಷೋಘ್ನ ಹೋಮ ನಡೆದ ಬಳಿಕ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು.




ಫೆ. ೨೧ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮ ಕಲಶ ಪೂಜೆ ನಡೆಯಿತು. ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, ಮಹಾಪೂಜೆ, ಪ್ರಾದ ವಿತರಣೆ ನಡೆದ ಬಳಿಕ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಕಲಶೋತ್ಸವ ವೇಳೆ ಆಡಳಿತ ಸಮಿತಿಯವರು ಹಾಗೂ ಮುಖ್ಯಸ್ಥರು, ಸಂಪಾಜೆ-ಅರೆಕಲ್ಲಿನ ಸಾರ್ವಜನಿಕರು ಭಾಗಿಯಾಗಿದ್ದರು.