ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.23 ರಂದು ಮತದಾನ ನಡೆಯಲಿದ್ದು ಅಂದೇ ಮತ ಎಣಿಕೆ ಆಗಿ ಫಲಿತಾಂಶ ಹೊರಬೀಳಲಿದೆ.
ಒಟ್ಟಾಗಿ 27 ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಯ ಸಹಕಾರಿ ಭಾರತಿ 12 ಮಂದಿ ಹಾಗೂ, ರೈತ ಸಹಕಾರ ಭಾರತದ 12 ಮಂದಿ ಸ್ಪರ್ಧೆಯಲ್ಲಿದ್ದಾರೆ. ಪಕ್ಷೇತರರಾಗಿ ಮೂರು ಮಂದಿ ಕಣದಲ್ಲಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಯಿಂದ ಸಾಮಾನ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ರವೀಂದ್ರ ಕಾನಾವು ಅಡ್ಡನಪಾರೆ, ಪದ್ಮನಾಭ ಮೀನಾಜೆ ಕಣದಲ್ಲಿದ್ದಾರೆ.
ರೈತ ಸಹಕಾರ ಭಾರತ ತಂಡದಿಂದ ಸನತ್ ಮುಳುಗಾಡು, ಪ್ರವೀಣ್ ಮುಂಡೋಡಿ, ಸುಧಾಕರ ಮಲ್ಕಜೆ, ಜಯಾನಂದ ಪಟ್ಟೆ, ಗಿರೀಶ್ ಪಂಡಬೈಲು, ದಿನೇಶ್ ಹಾಲೆಮಜಲು ಕಣದಲ್ಲಿದ್ದಾರೆ.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸಹಕಾರಿ ಭಾರತಿಯ ಕೃಷ್ಣಯ್ಯ ಮೂಲೆತೋಟ, ರೈತ ಸಹಕಾರ ಭಾರತ ತಂಡದ ಕರುಣಾಕರ ಹೊಸಹಳ್ಳಿ ಕಣದಲ್ಲಿದ್ದಾರೆ,
ಹಿಂದುಳಿದ ಬಿ ಕ್ಷೇತ್ರದಿಂದ ರೈತ ಸಹಕಾರ ಭಾರತ ತಂಡದ ಮಧುಕಿರಣ ಪೂಜಾರಿಕೋಡಿ, ಸಹಕಾರ ಭಾರತಿಯ ವಿನ್ಯಾಸ್ ಕೊಚ್ಚಿ ಕಣದಲ್ಲಿದ್ದಾರೆ.
ಮಹಿಳಾ ಕ್ಷೇತ್ರದಿಂದ ರೈತ ಸಹಕಾರ ಭಾರತ ತಂಡದ ಶಶಿಕಲಾ ದೇರಪಜ್ಜನ ಮನೆ, ರತ್ನಾವತಿ ಹುಲ್ಲುಕುಮೇರಿ, ಸಹಕಾರ ಭಾರತಿಯ
ತಿಲಕ ಕೋಲ್ಯ, ವಿನುತಾ ಜಾಕೆ ಸ್ಪರ್ಧೆಯಲ್ಲಿದ್ದಾರೆ.
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರೈತ ಸಹಕಾರ ಭಾರತ ತಂಡದ ಪುರುಷೋತ್ತಮ ಅಡ್ಡನಪಾರೆ,
ಪರಿಶಿಷ್ಟ ಪಂಗಡದಿಂದ
ಸಹಕಾರ ಭಾರತಿಯ
ಜನಾರ್ದನ ನಾಯ್ಕ ಅಚ್ರಪ್ಪಾಡಿ
ನಾಮಪತ್ರ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸಹಕಾರಿ ಭಾರತಿಯ ಕುಂಞ ಬಳ್ಳಕ್ಕ ರೈತ ಸಹಕಾರ ಭಾರತ ತಂಡದ ಪರಿಶಿಷ್ಟ ಜಾತಿಯಿಂದ ಬಾಲಪ್ಪ ಬಳ್ಳಕ್ಕ ಕಣದಲ್ಲಿದ್ದಾರೆ.
ಪಕ್ಷೇತರರಾಗಿ ಸಾಮಾನ್ಯ ಸ್ಥಾನದಿಂದ ಗೋಪಾಲಕೃಷ್ಣ ಪುರ್ಲುಮಕ್ಕಿ, ದಾಮೋದರ ತುಪ್ಪದಮನೆ, ರಾಜಗೋಲ ಅಂಬೆಕಲ್ಲು ಕಣದಲ್ಲಿದ್ದಾರೆ.