ಸಹಸ್ರಾರು ಅಜ್ಜನ ಭಕ್ತರಿಂದ ಹರಕೆಯ ಹೂಮಾಲೆ ಸಮರ್ಪಣೆ
ಮಂಡೆಕೋಲು ಗ್ರಾಮದ ಪೇರಾಲು ಕೊಡೆಂಚಿಕಾರ್ ಶ್ರೀ ಕೊರಗ ತನಿಯ ದೈವಸ್ಥಾನದಲ್ಲಿ 23 ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು ಫೆ.22 ರಂದು ಭಕ್ತಿ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಅರ್ಚಕರಿಂದ ಗಣಪತಿ ಹವನ ಮತ್ತು ನಾಗಪೂಜೆ ಹಾಗೂ ಶನಿ ಪೂಜೆಯಾಗಿ ಹೂವಿನ ಪೂಜೆಯಾಗಿ ಕಲಶ ಸ್ನಾನದ ಬಳಿಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಮಧ್ಯಾಹ್ನಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು. ಅಪರಾಹ್ನ
ಶ್ರೀ ಗುಳಿಗ ದೈವದ ಕೋಲವಾಗಿ ಪ್ರಸಾದ ವಿತರಣೆಯಾಯಿತು.

ರಾತ್ರಿಮಹಾಪೂಜೆಯಾಗಿ ಶ್ರೀ ಕೊರಗಜ್ಜ ದೈವದ ಪಾತ್ರಿಗಳ ನೇತೃತ್ವದಲ್ಲಿ ದೈವದ ಭಂಡಾರ ತೆಗೆದು ಸಾರ್ವಜನಿಕ ಅನ್ನ ಸಂತರ್ಪಣೆ ವಿತರಣೆಯಾಯಿತು. ಬಳಿಕ ರಾತ್ರಿ ಏಕಕಾಲದಲ್ಲಿ ಏಳು ಕೊರಗಜ್ಜ ದೈವಗಳ ಕೋಲವು ನಡೆಯಿತು. ಈ ಸಂದರ್ಭದಲ್ಲಿ ಸರತಿಯ ಸಾಲಿನಲ್ಲಿ ನಿಂತ ಸಹಸ್ರಾರು ಭಕ್ತಾದಿಗಳು ಶ್ರೀ ಕೊರಗ ತನಿಯ ದೈವಕ್ಕೆ ಹರಕೆಯ ಹೂಮಾಲೆಯನ್ನು ಸಮರ್ಪಿಸಿದರು. ಮರುದಿನ ಪ್ರಾತ:ಕಾಲದಲ್ಲಿ ಹರಕೆಯ ತುಲಾಭಾರ ಸೇವೆ ನಡೆದು ಪ್ರಸಾದ ವಿತರಣೆಯಾಯಿತು.
ದೈವಸ್ಥಾನದ ದೈವರಾಧಕ ಕೃಷ್ಣಪ್ಪ ಕೊಡೆಂಚಿಕಾರ್ ಮತ್ತು ಬಾಬು ಕೆ ಯವರು ನೇಮೋತ್ಸವದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕ ರಾಗಿ ಸೇವೆ ಸಲ್ಲಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಊರಿನ ಮತ್ತು ಪರ ಊರಿನ ಭಕ್ತಾದಿಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಸುತ್ತಲೂ ಆಕರ್ಷಕ ವಿದ್ದುದ್ದೀಪಗಳಿಂದ ಹಾಗೂ ಕೇಸರಿ ಬಂಟಿಂಗ್ಸ್ ಅಳವಡಿಸಿ ಶೃಂಗಾರ ಮಾಡಲಾಗಿತ್ತು. ಪಾರ್ಕಿಂಗ್ ಹಾಗೂ ಅನ್ನ ಸಂತರ್ಪಣೆಯ ವ್ಯವಸ್ಥೆ ಅಚ್ಚು ಕಟ್ಟಾಗಿ ನಿರ್ವಹಿಸಲಾಗಿತ್ತು