ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಆಶ್ರಯದಲ್ಲಿ ಪೂರ್ವ ರಾಜ್ಯಪಾಲರ ಮಾಸಾಚರಣೆ ಮತ್ತು ಕೃಷಿ ಸಾಧಕರಿಗೆ ಸನ್ಮಾನ ಫೆ. 18ರಂದು ಕ್ಲಬ್‌ನ ಕಾರ್ಯದರ್ಶಿ ಚೇತನ್ ಡಿ. ಶೆಟ್ಟಿಯವರ ಪೆರುವಾಜೆಯ ಮಂಜಣ್ಣ ಶೆಟ್ಟಿ ಫ್ಯಾಮಿಲಿ ಫಾರ್ಮ್ಸ್ ನಲ್ಲಿ ನಡೆಯಿತು.



ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಫಾರ್ಮ್ ಹೌಸ್ ನ ತೋಟದಲ್ಲಿರುವ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ವೀಕ್ಷಿಸಿಲಾಯಿತು. ಬಳಿಕ ಕ್ಲಬ್‌ನ ಅಧ್ಯಕ್ಷೆ ಲ. ಉಷಾ ಬಿ. ಭಟ್ ರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕ್ಲಬ್‌ನ ಕಾರ್ಯದರ್ಶಿ ಚೇತನ್ ಡಿ ಶೆಟ್ಟಿ ಮತ್ತು ಶ್ರೀಮತಿ ಯಶಸ್ವಿನಿ ದಂಪತಿಯನ್ನು ಕೃಷಿ ಸಾಧನೆಗಾಗಿ ಸನ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ಉಷಾ ಬಿ ಭಟ್ ಪೂರ್ವ ರಾಜ್ಯಪಾಲರುಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಲ. ಚೇತನ್ ಡಿ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಈಶ್ವರ ವಾರಣಾಶಿ ನೀತಿ ಸಂಹಿತೆಯನ್ನು ವಾಚಿಸಿ, ಕೊನೆಯಲ್ಲಿ ವಂದಿಸಿದರು. ಲ. ಸುನಿತಾ ಮನೋಯರ್ ಧ್ವಜ ವಂದನೆ ಮತ್ತು ನಿಕಟಪೂರ್ವಾಧ್ಯಕ್ಷ ಲ. ವಿಠಲ್ ಶೆಟ್ಟಿ ಪೆರುವಾಜೆ ಪ್ರಾರ್ಥನೆ ಮಾಡಿದರು. ಲ. ಚೇತನ್ ಡಿ ಶೆಟ್ಟಿ ದಂಪತಿಗಳು ಆತಿಥ್ಯ ನೀಡಿದರು.