ಮಾ.15ರಂದು ಸಹಕಾರ ರತ್ನ ಚಂದ್ರ ಕೋಲ್ಟಾರ್ ರಿಗೆ ಅಭಿನಂದನಾ ಸಮಾರಂಭ : ಸಮಿತಿ‌ ರಚನೆ

0

ಅಧ್ಯಕ್ಷರಾಗಿ ಉದ್ಯಮಿ ಎಸ್.ಆರ್.ಸೂರಯ್ಯ ಗೌಡ ಆಯ್ಕೆ

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೊಪರೆಟಿವ್ ಸೊಸೈಟಿಯ ಪೂರ್ವಾಧ್ಯಕ್ಷರು, ಹಾಲಿ ನಿರ್ದೇಶಕರು, ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರು, ದ.ಕ. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿರುವ ಸಹಕಾರಿ ರತ್ನ ಪುರಸ್ಕೃತ ರಾದ ಚಂದ್ರ ಕೋಲ್ಟಾರ್‌ ರವರು ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಸಂಜೆ ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಇದಕ್ಕಾಗಿ ಅವರ ಹಿತೈಷಿ ಬಳಗ ಅಭಿನಂದನಾ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರಾಗಿ ಸುಳ್ಯ ಸೂಂತೋಡು ಎಂಪೋರಿಯಂ ಮಾಲಕರಾದ ಸೂರಯ್ಯ ಗೌಡ ಎಸ್. ಆರ್., ದಿನೇಶ್ ಕೋಲ್ಟಾರು ಕಾರ್ಯದರ್ಶಿಯಾಗಿ, ದಿನೇಶ್ ಮಡಪ್ಪಾಡಿ ಸಂಚಾಲಕರಾಗಿ, ಕೆ.ಟಿ.ವಿಶ್ವನಾಥ ಕೋಶಾಧಿಕಾರಿಯಾಗಿ ಮತ್ತು ಉಪಾಧ್ಯಕ್ಷರುಗಳಾಗಿ ಪುರುಷೋತ್ತಮ ಕೋಲ್ಟಾರು, ದೊಡ್ಡಣ್ಣ ಬರೆಮೇಲು, ಚಂದ್ರಶೇಖರ ಪೇರಾಲು, ತಿಮ್ಮಯ್ಯ ಪಿಂಡಿಮನೆ, ಮತ್ತು ಜತೆ ಕಾರ್ಯದರ್ಶಿ ಗಳಾಗಿ ಸುಪ್ರೀತ್ ಮೋಂಟಡ್ಕ ಮತ್ತು ಪ್ರೀತಮ್ ಡಿ.ಕೆ.ಯವರು ಆಯ್ಕೆಯಾಗಿರುತ್ತಾರೆ.