
ಎಣ್ಮೂರು ಸ.ಹಿ. ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ ಮಾ. 1ರಂದು ನಡೆಯಿತು. ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.




ಎಣ್ಮೂರು ಕ್ಲಸ್ಟರ್ ಸಿ.ಆರ್.ಪಿ ಯಾದ ಜಯಂತ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿಎಂ ಸಿ. ಅಧ್ಯಕ್ಷರಾದ ಅಬ್ದುಲ್ ಶರೀಫ್, ಉಪಾಧ್ಯಕ್ಷ ಶ್ರೀಮತಿ ವನಿತಾ ರೈ, ಸಹ ಶಿಕ್ಷಕಿಯರಾದ ಶ್ರೀಮತಿ ಶಾಂತಮ್ಮ, ಸುರೇಖಾ, ಗುಲಾಬಿ, ಸೌಮ್ಯ, ಸುದರ್ಶನ್ ಸಹಕರಿಸಿದರು. ಸಹಶಿಕ್ಷಕಿಯಾದ ಶ್ರೀಮತಿ ಶಾಂತಮ್ಮ ವಂದಿಸಿದರು.
