ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ರಾಜ್ಯದೈವ ಪುರುಷಭೂತ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿಯವರನ್ನು ಆಯ್ಕೆ ಮಾಡಿ ಸರಕಾರದ ಧಾರ್ಮಿಕ ದತ್ತಿ ಇಲಾಖೆ ನೇಮಕಗೊಳಿಸಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರಾಗಬೇಕಿದ್ದು, ಕೆಲ ವಾರಗಳ ಹಿಂದೆ 8 ಮಂದಿ ಸದಸ್ಯರನ್ನು ನೇಮಕಗೊಳಿಸಲಾಗಿತ್ತು. ಇದೀಗ ಉಳಿದ ಒಂದು ಸ್ಥಾನಕ್ಕೆ ಕಾಳಿಕಾಪ್ರಸಾದರನ್ನು ನೇಮಕ ಮಾಡಿದ್ದು, ಅವರೇ ಅಧ್ಯಕ್ಷರಾಗಿದ್ದಾರೆ.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ರವರ ಶಿಫಾರಸ್ಸಿನಮೇಲೆ ಈ ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ.