ಸುಳ್ಯ: ಭಗವತಿ ಸ್ಟೋರ್ ಶುಭಾರಂಭ

0

ಗೋಪಿನಾಥ ನೀರಬಸಿರಿ ಕುತ್ಯಾಳ ಇವರ ಮಾಲಕತ್ವದ ಭಗವತಿ ಸ್ಟೋರ್ ಮಾ. 2ರಂದು ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ಕಟ್ಟಡ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಶ್ರೀವರ ಭಟ್ ಗಣಪತಿ ಹವನ ನೆರವೇರಿಸಿದರು.


ಉದ್ಘಾಟನೆಯನ್ನು ಶ್ರೀ ಕಿಣ್ಣಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ ನಡುಬೆಟ್ಟು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರುಕ್ಮಯ್ಯ ಗೌಡ ಸುತ್ತುಕೋಟೆ, ರಂಜಿತ್ ಕುಕ್ಕೆಟ್ಟಿ, ಹರಿಶ್ಚಂದ್ರ ಗೌಡ ಮತಾವು, ಚಿದಾನಂದ ಗೋಪಾಲಕಜೆ, ಧನಂಜಯ ಗೌಡ ಕಾಯಾರ, ಸುಳ್ಯ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಶರ್ಮಿಳಾ, ದಿನೇಶ್ ಹುಲಿಮನೆ, ಶ್ರೀಮತಿ ವೇದಾವತಿ ನೀರಬಸಿರಿ ಕುತ್ಯಾಳ, ಕು. ಕ್ಷಮಾ, ಕು. ಶ್ರೀಗೌರಿ, ಶಿವರಾಮ ಕುದ್ಪಾಜೆ, ವಿಜಯಕುಮಾರ್ ಕೋಡ್ತಿಲು, ನಂದರಾಜ್ ಸಂಕೇಶ, ದೇವಪ್ಪ ಗೌಡ ಸೂರ್ತಿಲ, ಶ್ರೀಮತಿ ಚಂದ್ರಾವತಿ ಸೂರ್ತಿಲ, ವೆಂಕಟ್ರಮಣ ಕುದ್ಪಾಜೆ, ಚಂದ್ರಶೇಖರ ಅಡ್ಪಂಗಾಯ, ಥೀರ್ಥರಾಮ ನಡುಮನೆ ಮತ್ತಿತರರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ದಿನಸಿ ಸಾಮಾಗ್ರಿಗಳು, ದಿನ ಬಳಕೆಯ ಗೃಹೋಪಯೋಗಿ ಸಾಮಾಗ್ರಿಗಳಾದ ಹಾಲು, ತರಕಾರಿ, ಹಣ್ಣುಹಂಪಲು, ಜ್ಯೂಸ್, ಐಸ್ ಕ್ರೀಂ ಇತ್ಯಾದಿ ಸಾಮಾಗ್ರಿಗಳು ದೊರೆಯಲಿದೆ. ಗೋಪಿನಾಥ ನೀರಬಸಿರಿ ಕುತ್ಯಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.