ಇಂದು ಸಂಜೆ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಸುಮಧುರ ಸಂಜೆ ಕಾರ್ಯಕ್ರಮ, ಪುಸ್ತಕ ಬಿಡುಗಡೆ

0

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿ ಇಂದು ಸಂಜೆ ಸುಮಧುರ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ರಾಮಕೃಷ್ಣ ಚೂಂತಾರು ಅವರ ಶೈಕ್ಷಣಿಕ ಪುಸ್ತಕ ಬಿಡುಗಡೆ ನಡೆಯಲಿದೆ. ಸುಮಧುರ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಸುಪ್ರಿಯ ರಘುನಂದನ್ ಮತ್ತು ಉದಯೋನ್ಮುಖ ಗಾಯಕಿ ಸುಮಾ ಕೋಟೆ ಭಾವಗೀತೆ, ಜಾನಪದ ಗೀತೆ, ಚಲನ ಚಿತ್ರ ಗೀತೆ ಹಾಗೂ ಭಕ್ತಿಗೀತೆಗಳನ್ನು ಹಾಡಲಿದ್ದಾರೆ.