Home Uncategorized ಮಾ.5 – ಮಾ.6: ಗುತ್ತಿಗಾರಿನ ಮುತ್ತಪ್ಪನಗರದಲ್ಲಿ ಶ್ರೀ ಮುತ್ತಪ್ಪ ದೈವಸ್ಥಾನ ವಾರ್ಷಿಕ ಜಾತ್ರೋತ್ಸವ

ಮಾ.5 – ಮಾ.6: ಗುತ್ತಿಗಾರಿನ ಮುತ್ತಪ್ಪನಗರದಲ್ಲಿ ಶ್ರೀ ಮುತ್ತಪ್ಪ ದೈವಸ್ಥಾನ ವಾರ್ಷಿಕ ಜಾತ್ರೋತ್ಸವ

0

ಗುತ್ತಿಗಾರಿನ ಶ್ರೀ ಮುತ್ತಪ್ಪ ದೈವಸ್ಥಾನ ಮುತ್ತಪ್ಪನಗರ ಇಲ್ಲಿನ ಶ್ರೀ ಮುತ್ತಪ್ಪ ತಿರುವಪ್ಪ ದೇವರ ವಾರ್ಷಿಕ ಜಾತೋತ್ಸವ ಮಾ..5 ಮತ್ತು ಮಾ.6 ರಂದು ನಡೆಯಲಿದೆ.

ಮಾ.5 ರ ಬೆಳಗ್ಗೆ ಶ್ರೀ ಗಣಪತಿ ಹವನ ನಡೆಯಲಿದೆ. ಸಂಜೆ 4:30 ಶ್ರೀ ದೈವಕ್ಕೆ ಪೈಂಗುತ್ತಿ ನಡೆಯಲಿದೆ. ಸಂಜೆ ,5:30 ರಿಂದ ಶ್ರೀ ಮುತ್ತಪ್ಪ ದೇವರ ನೇಮ ನಂತರ ಸೇವೆಗಳ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಅನ್ನ ಸಂತರ್ಪಣೆ ನಡೆದು ರಾತ್ರಿ ಗಂಟೆ 9 ರಿಂದ ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳೆಕ್ಕಾಪಾಟ್ ನಡೆಯಲಿದೆ.
ರಾತ್ರಿ 11 ರ ಬಳಿಕ ಸಹಿಹಿತ್ಲು ಮೇಳದವರಿಂದ “ಕತೆಗಾರ್ತಿ ಕಲ್ಪನಾ ಎಂಬ ಹಾಸ್ಯಮಯ ತುಳು ಕಥಾನಕ ನಡೆಯಲಿದೆ. ಮಾ. 6 ರಂದ ಬೆಳಗ್ಗೆ 6 ರಿಂದ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ ನಡೆದು ಪ್ರಸಾದ ವಿತರಣೆ ಬಳಿಕ ನಡೆದು ಬಳಿಕ ಶ್ರೀ ದೈವಕ್ಕೆ ವೆಳ್ಳಾಟಂ ನಡೆಯಲಿದೆ.

NO COMMENTS

error: Content is protected !!
Breaking