ಇಂದು ರಾತ್ರಿ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ- ಗಾನ- ಸಂಗಮ
ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವರ ಜಾತ್ರೋತ್ಸವ ಆರಂಭಗೊಂಡಿದ್ದು, ಇದರ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವು ದೇವಾಲಯದ ವೇದಿಕೆಯಲ್ಲಿ ಮಾ.೪ ರಂದು ರಾತ್ರಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ. ಎಸ್.ಗಂಗಾಧರ್ ರವರು ವಹಿಸಿದ್ದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ಹಿರಿಯರಾದ ಶಂಕರಿ ಅಮ್ಮ, ಉಬರಡ್ಕ ಮಿತ್ತೂರು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ಪಾಲಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಜೇಶ್ ಭಟ್ ನೆಕ್ಕಿಲ, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಜಾತ್ರೋತ್ಸವ ಸಮಿತಿ ಸಂಚಾಲಕ ವಿಜಯಕುಮಾರ್ ಉಬರಡ್ಕ, ಜಾತ್ರೋತ್ಸವ ಸಮಿತಿ ಕೋಶಧಿಕಾರಿ ಶೀನಪ್ಪ ಗೌಡ, ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಶೆಟ್ಟಿಹಿತ್ಲು, ಶಿವರಾಮ ಎಂ.ಪಿ, ಗಂಗಾಧರ ಕೆ, ಶ್ರೀಮತಿ ಸರೋಜಿನಿ ಎಸ್.ಶೆಟ್ಟಿ, ಶ್ರೀಮತಿ ವಾರಿಜಾ ಮಂಜಿಕಾನ, ಶ್ರೀಮತಿ ಸುಮಲತಾ ಜಗದೀಶ್, ನಾರಾಯಣ ಎ., ಅರ್ಚಕ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನರಸಿಂಹ ದೇವರ ನರಸಿಂಹ ನಮೋಸ್ತುತೆ ಎಂಬ ಭಕ್ತಿಗೀತೆಯನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಯಿತು.
ಅಪ್ರಮೇಯ ಮಿತ್ತೂರು ಪ್ರಾರ್ಥಿಸಿ, ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ವಿಜಯ ಕುಮಾರ್ ಉಬರಡ್ಕ ವಂದಿಸಿದರು. ಶ್ರೀಮತಿ ಚೈತ್ರಾ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.
ಇಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹರ್ಷಿತ್ ಮರ್ಕಂಜ ಸಂಯೋಜನೆಯಲ್ಲಿ ಝೀ ಕನ್ನಡ, ಕಲರ್ ಸೂಪರ್, ಸ್ಟಾರ್ ಪ್ಲಸ್ ಖ್ಯಾತಿಯ ತಂಡದಿಂದ ವೈವಿಧ್ಯಮಯ ನೃತ್ಯ, ಸ್ಟಾರ್ ನೈಟ್ ಗಳ ನೆಚ್ಚಿನ ಹಾಡುಗಾರರ ಸಮಾಗಮ ನೃತ್ಯ-ಗಾನ-ಸಂಗಮ ನಡೆಯಲಿದೆ.