ಯಕ್ಷಗಾನ ಕಲಾವಿದ ಸಂಯೋಜಕ ಶೇಖರ ಮಣಿಯಾಣಿ ಯವರ ಸಂಯೋಜನೆಯಲ್ಲಿ ಎ.9 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು ನಡೆಯಲಿರುವ ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ ಎಂಬ ಯಕ್ಷಗಾನ ಬಯಲಾಟದ ಕರ ಪತ್ರವನ್ನು ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರು ಮಾ.4 ರಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಿವಳ್ಳಿ ಸಂಘದ ಅಧ್ಯಕ್ಷ ರಾಮ ಹೆಬ್ಬಾರ್, ವಿ.ಹೆಚ್.ಪಿ ಜಿಲ್ಲಾ ಪ್ರಮುಖ್ ಶಶಾಂಕ ಭಟ್, ವಿದ್ವಾಂಸರಾದ ಎಂ.ರಾಘವೇಂದ್ರ, ನಾರಾಯಣ ವೈಲಾಯ, ರಾಮಚಂದ್ರ ಸೋಮಯಾಗಿ ಯವರು ಉಪಸ್ಥಿತರಿದ್ದರು.