ಮಾ.5-6: ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮ

0

ಕರಿಕ್ಕಳದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ವಾರ್ಷಿಕ ಪೂಜಾ ಕಾರ್ಯಕ್ರಮ ಮಾ.5 ಮತ್ತು ಮಾ.6ರಂದು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 

ಮಾ.5 ರಂದು ಸಂಜೆ  ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ದುರ್ಗಾಪೂಜೆ ರಾತ್ರಿ  ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮಾ. 6 ಬೆಳಿಗ್ಗೆ ವಿವಿಧ ಹೋಮ, ಹವನ, ಕಲಶಪೂಜೆ, ಕಲಶಾಭೀಷೇಕ, ಮಹಾಪೂಜೆ. ಮಧ್ಯಾಹ್ನ  ಮಹಾಮಂಗಳಾರತಿ , ಅನ್ನ ಸಂತರ್ಪಣೆ ಜರಗಲಿರುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.