ವರ್ಷoಪ್ರತಿ ನಡೆಯುವ ದ.ಕ ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತವು ಮಾರ್ಚ್ 14 ರಂದು ನಡೆಯಲಿದೆ.
ಪೂರ್ವಾಹ್ನ ಗಂಟೆ 9:40 ರ ಶುಭ ಮುಹೂರ್ತದಲ್ಲಿ ಮಹಾವಿಷ್ಣು ಮೂರ್ತಿಯ ಒತ್ತೆಕೋಲಕ್ಕೆ ಮುಹೂರ್ತದ ಕೊಳ್ಳಿ ಕಡಿಯಲಿದೆ. ಎಲ್ಲಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಮಹಾವಿಷ್ಣು ಮೂರ್ತಿ ದೈವದ ಅರಶಿನ ಪ್ರಸಾದವನ್ನು ಸ್ವೀಕರಿಸಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿ, ಪದಾಧಿಕಾರಿಗಳು, ಸರ್ವಸದಸ್ಯರು, ಹಾಗೂ ತೀಯ ಸಮಾಜದ ಅಧ್ಯಕ್ಷರು – ಸರ್ವಸದಸ್ಯರು ತಿಳಿಸಿದ್ದಾರೆ.


