ಚೆಂಬು : ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ, ಅಪಾರ ನಷ್ಟ

0

ಚೆಂಬು ಗ್ರಾಮದ ಎಕ್ಕಡ್ಕ ಚರಿತರವರ ರಬ್ಬರ್ ಸ್ಮೋಕ್ ಹೌಸಿಗೆ ಬೆಂಕಿ ತಗುಲಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ.

ಬೆಂಕಿಯ ಕಿಡಿಯಿಂದ ಅವಘಡ ಸಂಭವಿಸಿದ್ದು, ಪರಿಣಾಮ ಇಡೀ ಸ್ಮೋಕ್ ಹೌಸ್ ಹೊತ್ತಿ ಉರಿದಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ವಿಚಾರ ತಿಳಿದ ತಕ್ಷಣ ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಸುಮಾರು 5 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.