ಕರ್ನಾಟಕ ರಾಜ್ಯ ರೈತ ಉತ್ಪಾದಕ‌ ಸಹಕಾರಿ ಸಂಘ ಬೆಂಗಳೂರು‌ ಇದರ ನಿರ್ದೇಶಕರಾಗಿ ವೀರಪ್ಪ ಗೌಡ ಕಣ್ಕಲ್ ಅವಿರೋಧ ಆಯ್ಕೆ

0

ಕರ್ನಾಟಕ ರಾಜ್ಯ ರೈತ ಉತ್ಪಾದಕ‌ ಸಹಕಾರಿ ಸಂಘ ಬೆಂಗಳೂರು‌ ಇದರ
ನಿರ್ದೇಶಕರಾಗಿ ವೀರಪ್ಪ ಗೌಡ ಕಣ್ಕಲ್ ಅವಿರೋಧ ಆಯ್ಕೆಯಾಗಿದ್ದಾರೆ.

ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳ ಸಹಕಾರಿ ಸಂಘಕ್ಕೆ ರಾಜ್ಯದ‌ ಮೂರು ಜಿಲ್ಲೆಗೆ ಒಬ್ಬರಂತೆ ನಿರ್ದೇಶಕರನ್ನು ಆಯ್ಕೆ‌ ಮಾಡಲಾಗುತ್ತದೆ.

ಅದರಂತೆ ದಕ್ಷಿಣ ಕನ್ನಡ, ಕೊಡಗು, ಉಡುಪಿ‌ ಜಿಲ್ಲೆಗಳಿಗೆ ಒಳಪಟ್ಟು ವೀರಪ್ಪ ಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬೆಳಗಾವಿ ಭಾಗದಿಂದ ಒಬ್ಬರು ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದ 10 ನಿರ್ದೇಶಕ ಸ್ಥಾನಕ್ಕೆ ಮಾ.22ರಂದು ಚುನಾವಣೆ ನಡೆಯಲಿದೆ.

ಕೈಗಾರಿಕಾ ಇಲಾಖೆಯ‌ ನಿವೃತ್ತ ಅಧಿಕಾರಿಯಾಗಿರುವ ವೀರಪ್ಪ ಗೌಡರು 2022ರಲ್ಲಿ ಸುಳ್ಯದಲ್ಲಿ ರೈತ ಉತ್ಪಾದಕ ಕಂಪೆನಿ ಆರಂಭಗೊಂಡಾಗ ಸ್ಥಾಪಕ ಅಧ್ಯಕ್ಷರಾದರು. ಸಂಸ್ಥೆಯು ಅತ್ಯುತ್ತಮವಾಗಿ ಮುನ್ನಡೆಯುತ್ತಿದೆ.
ಸಂಸ್ಥೆಯು ಬೆಳ್ಳಾರೆಯಲ್ಲಿ ಮತ್ತು ಎಲಿಮಲೆಯಲ್ಲಿ ಸಹ ಸಂಸ್ಥೆಗಳನ್ನು ಆರಂಭಿಸಿದ್ದು ರೈತರಿಗೆ ಸಹಕಾ ರಿಯಾಗಿ ಕೆಲಸ ಮಾಡುತ್ತಿದೆ.

ವೀರಪ್ಪ ಗೌಡರ ಪತ್ನಿ ಕಲಾವತಿಯವರು ಅರಂಬೂರು ಇಡ್ಯಡ್ಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಮಗ ಡಾ.ಕೆ.ವಿ. ಶೋಧನ್ ಏನಪೋಯ ಮೆಡಿಕಲ್ ಕಾಲೇಜಿನಲ್ಲಿ ಪಶು ವೈದ್ಯರಾಗಿದ್ದಾರೆ. ಮಗಳು ಡಾ.ಕೆ.ವಿ. ಅಂಕಿತಾ ಉಡುಪಿ ಉದ್ಯಾವರದ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಎಂ.ಡಿ. ವಿದ್ಯಾಭ್ಯಾಸ ಮಾಡುತ್ತಿದ್ದಾರೆ.