ನೆಹರು ಯುವ ಕೇಂದ್ರ ಮತ್ತು ಯುವ ಕಾರ್ಯ ಸಚಿವಾಲಯ ಮಂಗಳೂರು ಮತ್ತು ಅಂಬಿಕಾ ಮಹಿಳಾ ಮಂಡಲ (ರಿ )ಅರಂಬೂರು ಇವುಗಳ ಜಂಟಿ ಆಶ್ರಯ ದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ ಅರಂಬೂರು ಶ್ರೀ ಗೋಪಾಲ ಕೃಷ್ಣ ಸಭಾಂಗಣ ದಲ್ಲಿ ಮಹಿಳಾ ಮಂಡಲ ದ ಅಧ್ಯಕ್ಷೆ ಅಮಿತಾ ರೈ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ದ. ಕ. ಜಿ. ಪ. ಹಿ. ಪ್ರಾ. ಶಾಲೆ ಇಡ್ಯಡ್ಕ ಅರಂಬೂರು ಇಲ್ಲಿಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿಯವರು ಕಾರ್ಯಕ್ರಮ ವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಹಾಗೂ ಮಹಿಳೆಯರ ಹಕ್ಕು ಮತ್ತು ಕರ್ತವ್ಯ ದ ಬಗ್ಗೆ ತಿಳಿಸಿದರು. ಸುಳ್ಯದ ವಕೀಲರಾದ ಧರ್ಮಪಾಲ ಕೊಯಿಂಗಾಜೆ ಇವರು ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿಯನ್ನು ನೀಡಿದರು. ಅತಿಥಿ ಗಳಾಗಿ ಆಗಮಿಸಿದ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪೂರ್ವಧ್ಯಕ್ಷರುಗಳಾದ ಶ್ರೀಮತಿ ಪ್ರಪುಲ್ಲ ಪಿ. ರೈ ಹಾಗೂ ಚಂದ್ರಾಕ್ಷಿ ಜೆ. ರೈ ಯವರು ಮಾತನಾಡಿದರು. ಈ ಕಾರ್ಯಕ್ರಮ ದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆ ಯಲ್ಲಿ ವಿಜಯೀಯಾದವರಿಗೆ ಬಹುಮಾನ ಗಳನ್ನೂ ನೀಡಿ ಗೌಹಿಸಲಾಯಿತು. ಶ್ರೀಮತಿ ಶ್ಯಾಮಲಾ ಪ್ರಾರ್ಥಿಸಿದರು. ಶ್ರೀಮತಿ ಯಮಲಾಕ್ಷಿ ಸ್ವಾಗತಿಸಿದರು. ಶ್ರೀಮತಿ ವೇದಾವತಿ ವಂದಿಸಿದರು. ಶ್ರೀಮತಿ ಚಂದ್ರವತಿ ಬದಿಕಾನ ಕಾರ್ಯಕ್ರಮ ವನ್ನು ನಿರ್ವಹಿಸಿದರು.