ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮಾ.19ಮತ್ತು 20 ರಂದು ನಡೆಯಲಿದ್ದು, ಇಂದು ಸಂಜೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ.
ಕಲ್ದಂಬೆಯಿಂದ ಹಸಿರುವಾಣಿ ಮೆರವಣಿಗೆ ದೈವಸ್ಥಾನಕ್ಕೆ ಬರಲಿದ್ದು,ಬಳಿಕ ಉಗ್ರಾಣ ತುಂಬಿಸುವುದು ನಡೆಯಲಿದೆ.ಮೆರವಣಿಗೆಯಲ್ಲಿ ಶ್ರೀ ರಾಮ ಮಕ್ಕಳ ಭಜನಾ ಮಂಡಳಿ ಮಡಪ್ಪಾಡಿ ಇವರಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ ಗಂಟೆ 7ಕ್ಕೆ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾ.19ರಂದು ಬೆಳಿಗ್ಗೆ ಗಣಪತಿ ಹವನ, ನಾಗದೇವರಿಗೆ ತಂಬಿಲ, ಶ್ರೀ ದುಗ್ಗಲಾಯ ಮತ್ತು ಶ್ರೀ ರುಧಿರ ಚಾಮುಂಡಿ ,ಪರಿವಾರ ದೈವಗಳಿಗೆ ತಂಬಿಲ, ಸತ್ಯನಾರಾಯಣ ದೇವರಪೂಜೆ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡುಬೆಟ್ಟು ಚಾವಡಿಯಿಂದ ದುಗ್ಗಲಡ್ಕ ಮೂಲಸ್ಥಾನಕ್ಕೆ ಭಂಡಾರ ಆಗಮಿಸಿ ಶ್ರೀ ರುಧಿರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.20ರಂದು ಪೂ.10ರಿಂದ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ನಡೆಯಲಿದೆ.ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.ಮಾ. 21ರಂದು ಪೂ.10 ರಿಂದ ಕೆಎಫ್ ಡಿಸಿ ರಬ್ಬರ್ ತೋಟದ ಒಳಗಿರುವ ಕಟ್ಟೆಯಲ್ಲಿ ಗುಳಿಗ ದೈವದ ನೇಮ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ;
ಮಾ.19ರಂದು ಸಂಜೆ 7.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭೆಯನ್ನು ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ.
ಸಭಾಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಶ್ರೀ ದೇವಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಸುಳ್ಯ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ಎಸ್.ಅಂಗಾರ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕಳ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.