ಬೆಳ್ಳಾರೆ ಜ್ಞಾನದೀಪದಲ್ಲಿ ಬೇಸಿಗೆ ರಜೆಯ ವಿಶೇಷ ನವೋದಯ ತರಬೇತಿ ಶಿಬಿರ

0


ನವೋದಯ ಮತ್ತು ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಕಳೆದ 18 ವರ್ಷಗಳಿಂದ ತರಬೇತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಏ.15 ರಿಂದ ಮೇ. 15ರವರೆಗೆ ನಡೆಯಲಿದೆ.

ಒಂದು ತಿಂಗಳು ನಡೆಯುವ ಈ ತರಬೇತಿ ಶಿಬಿರದಲ್ಲಿ 4 ಅಥವಾ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ನವೋದಯ ತರಬೇತಿಯಲ್ಲಿ ಮುಖ್ಯವಾಗಿ ಗಣಿತ ವಿಷಯಕ್ಕೆ ಹೆಚ್ಚಿನ ಆದ್ಯತೆಯೊಂದಿಗೆ ತರಬೇತಿ ಶಿಬಿರ ನಡೆಯಲಿದ್ದು, ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುವ ಮಾನಸಿಕ ಸಾಮರ್ಥ್ಯ,ಭಾಷಾ ಜ್ಞಾನ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳಿಗೆ ತರಬೇತಿ ನಡೆಯಲಿದೆ. ಜ್ಞಾನದೀಪ ನವೋದಯ ತರಬೇತಿ ಕೇಂದ್ರದ ಮೂಲಕ ತರಬೇತು ಪಡೆದ ಒಟ್ಟು 185 ವಿದ್ಯಾರ್ಥಿಗಳು ಈಗಾಗಲೇ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಜೂನ್ ತಿಂಗಳಿನಿಂದ ನಡೆಯುವ ನಿರಂತರ ತರಗತಿಗೆ ಮೊದಲ ಆದ್ಯತೆ ನೀಡಲಾಗುವುದು. ಬೆಳ್ಳಾರೆ ಕೇಂದ್ರದಲ್ಲಿ ಒಟ್ಟು 50 ವಿದ್ಯಾರ್ಥಿಗಳಿಗೆ ಮಾತ್ರ ಶಿಬಿರದಲ್ಲಿ ಅವಕಾಶ ನೀಡಲಾಗುತ್ತದೆ ಆಸಕ್ತರು ವಿದ್ಯಾರ್ಥಿಗಳ ಪೋಷಕರು ಏ. 10ರ ಮೊದಲು ಹೆಸರು ನೋಂದಾಯಿಸಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.