ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಂತ್ರವಾದಿ ಗುಳಿಗ, ಮೊಗೇರ್ಕಳ ದೈವಗಳು, ತನ್ನಿಮಾನಿಗ ಹಾಗೂ ಕೊರಗ ತನಿಯ ನೇಮೋತ್ಸವ ಮಾ. 15 ಮತ್ತು 16 ರಂದು ನಡೆಯಿತು.

ಮಾ. 08 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಮಾ. 15 ರಂದು ಬೆಳಿಗ್ಗೆ ಗಣಹೋಮ ನಡೆಯಲಿದೆ. ಸಂಜೆ ಕುಣಿತ ಭಜನೆ, ಬಳಿಕ ಮಂತ್ರವಾದಿ ಗುಳಿಗ ದೈವದ ನೇಮ ನಡೆಯಿತು.

ರಾತ್ರಿ ಮೊಗೇರ್ಕಳ ದೈವಗಳ ಭಂಡಾರ ತೆಗೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಮೊಗೇರ್ಕಳ ದೈವಗಳ ನೇಮ, ತನ್ನಿಮಾನಿಗ ನೇಮ ನಡೆಯಿತು.
ಮಾ. 16 ರಂದು ಬೆಳಿಗ್ಗೆ ಕೊರಗ ತನಿಯ ದೈವದ ನೇಮ ನಡೆಯಿತು.

ಇದೇ ಸಂದರ್ಭದಲ್ಲಿ ಶಶಿಧರ ಕೆ ಸಿ ನಿರ್ಮಾಣದ, ಜಸ್ಮಿತ ಮತ್ತು ಜಯಂತಕುಮಾರ್ ದೊಡ್ಡಕುಮೇರಿ ಗಾಯನದ ಕುಲೊಕು ಸಿಂಗಾರ ಎಂಬ ಮೊಗೇರ್ಕಳ ದೈವಗಳ ಕಾರಣಿಕ ಮತ್ತು ದೊಡ್ಡಕುಮೇರಿ ದೈವಸ್ಥಾನದ ಇತಿಹಾಸವನ್ನು ಸಾರುವ ಹಾಡಿನ ಬಿಡುಗಡೆ ನಡೆಯಿತು. ಎರಡು ದಿನಗಳ ಕಾಲ ನೂರಾರು ಭಕ್ತರು ಆಗಮಿಸಿ ದೈವಗಳ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಆಡಳಿತ ಸಮಿತಿಯ ಪದಾಧಿಕಾರಿಗಳು ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.