ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಗೆ ಗುದ್ದಿದ ಕಾರು, ವಾಹನ ಜಖಂ

0

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆ ಎಸ್ ಆರ್ ಟಿ.ಸಿ ಬಸ್ ನ ಹಿಂಬದಿಗೆ ಗುದ್ದಿದ ಪರಿಣಾಮವಾಗಿ ವಾಹನ ಜಖಂಗೊಂಡ ಘಟನೆ ಮಾ.21 ರಂದು ಬೆಳಿಗ್ಗೆ ಪೆರಾಜೆಯಲ್ಲಿ ಸಂಭವಿಸಿದೆ.


ಸುಳ್ಯದಿಂದ ಸಂಪಾಜೆ ಕಡೆ ಬರುತ್ತಿದ್ದ ಕೆ ಎಸ್ ಆರ್ ಟಿ.ಸಿ ಬಸ್ ಹಾಗೂ ಅದೇ ಮಾರ್ಗವಾಗಿ ಮಡಿಕೇರಿಗೆ ತೆರಳುವ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನ ಜಖಂಗೊಂಡಿದೆ