ಗುಜರಾತ್‌ನ ಸ್ಮೃತಿವನದ ರೂವಾರಿ, ಗ್ರೀನ್ ಹೀರೋ ಆಪ್ ಇಂಡಿಯಾ, ಸುಳ್ಯದ ಡಾ. ಆರ್.ಕೆ. ನಾಯರ್‌ರವರಿಗೆ ಗುಜರಾತ್‌ನ ಆಯುಷ್ ವೈದ್ಯಕೀಯ ಸಂಸ್ಥೆಯವರು ನೀಡುವ ಆಯುಷ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಿಯಾವಕಿ ಅರಣ್ಯ ನಿರ್ಮಾಣ ಮೂಲಕ ಪರಿಸರ ಜಾಗೃತಿ ಕಾರ್ಯ ನಡೆಸುತ್ತಿರುವ ಆರ್.ಕೆ.ನಾಯರ್‌ರಿಗೆ ಮಾ. ೨೩ರಂದು ಗೌರವ ಕಾರ್ಯಕ್ರಮ ನಡೆಯಲಿದ್ದು, ಗುಜರಾತ್‌ನ ಹಣಕಾಸು ಸಚಿವ ಕಾನುಬಾಯಿ ದೇಸಾಯಿಯವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.