ಮಾರ್ಕಂಜದ ರೆಂಜಾಳ ಶ್ರೀ ಶಾಸ್ತ್ರವು ಯುವಕ ಮಂಡಲದ ವತಿಯಿಂದ ಹೊನಲು ಬೆಳಕಿನ ಸ್ಥಳೀಯ ತಂಡಗಳ ಮುಕ್ತ ಮತ್ತು ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ಇಂದು(ಮಾ. 22) ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಪಂದ್ಯಾಟದ ಉದ್ಘಾಟನೆಯನ್ನು ರೆಂಜಾಳ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ನೆರವೇರಿಸಲಿದ್ದಾರೆ.
ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗಿಶ್ವರ ಸಿದ್ಧಮಠದ ಧರ್ಮದರ್ಶಿಗಳಾದ ರಾಜೇಶ್ ನಾಥ್ ಜೀ ಟ್ರೋಫಿ ಅನಾವರಣ ಮಾಡಲಿದ್ದಾರೆ.
ಶಾಸ್ತ್ರವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಮಾರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೋಲಿಕೆ, ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕರ್ನಾಟಕ ವಾಲಿಬಾಲ್ ಎಸೊಸಿಯೇಶನ್ ಸೆಕ್ರೆಟರಿ ಏನ್. ಜಯಪ್ರಕಾಶ್ ರೈ, ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಉಬರಡ್ಕ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಮಾರ್ಕಂಜ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ದಯಾನಂದ ಪುರ, ಮಾರ್ಕಂಜ ಪಂಚಾಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ಕಾಯರ, ರೆಂಜಾಳ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾನೂರು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಉಸ್ತುವಾರಿ ನಿರ್ದೇಶಕ ನಿತೇಶ್ ಬೊಮ್ಮಟ್ಟಿ, ಬೊಳ್ಳಾಜೆ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯಾಯೊಪಧ್ಯಾಯಿನಿ ಶ್ಯಾಮಲಾ ಎ. ವಿ., ಸುಳ್ಯ ವಿನಯ್ ಐಸ್ ಕ್ರೀಮ್ ಮಾಲಕ ರಾಜೇಶ್ ಕೆಡಿಲಾಯ, ಉಬರಡ್ಕ ವಿನಯ ಕೆಟರರ್ಸ್ ನ ವಿನಯ ಯಾವಟೆ ಆಗಮಿಸಲಿದ್ದಾರೆ.
ವಿಜೇತರಿಗೆ ಬಹುಮಾನವು ನಗದು ಮತ್ತು ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ಹೊಂದಿದೆ.