Home Uncategorized ಎ.11 ರಿಂದ 19 : ಏನೆಕಲ್ಲಿನಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಪ್ರಾರಂಭ

ಎ.11 ರಿಂದ 19 : ಏನೆಕಲ್ಲಿನಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಪ್ರಾರಂಭ

0

ಋಷಿ ಯೋಗ ಇಂಡರ್ ನ್ಯಾಷನಲ್ ಫೌಂಡೇಶನ್ ಬೆಂಗಳೂರು ,ಶ್ರೀ ಮೋಹನ ರೆಡ್ಡಿ ಗುರೂಜಿ ಇವರ ಮಾರ್ಗದರ್ಶನದಲ್ಲಿ ಮಕ್ಕಳ ಸಂಸ್ಕಾರ ಶಿಬಿರವು ಎ.11 ರಿಂದ ಎ.,19 ಮತ್ತು ಎ.22 ರಿಂದ ಮೇ.01 ರವರೆಗೆ ಎರಡು ಬ್ಯಾಚ್ ಗಳಲ್ಲಿ ಏನೆಕಲ್ಲು ಶಂಖಪಾಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ವ್ಯಕ್ತಿತ್ವ ವಿಕಾಸ,ಜವಾಬ್ದಾರಿ,ಸ್ವಾವಲಂಬನೆ,ಆತ್ಮವಿಶ್ವಾಸ,ಧೈರ್ಯ,ಏಕಾಗ್ರತೆ,ನಾಯಕತ್ವ ಗುಣಗಳು,ಸಕಾರಾತ್ಮಕ ದೃಷ್ಟಿಕೋನ,ಯೋಗಾಸನ,ಪ್ರಾಣಾಯಾಮ,ಧ್ಯಾನ,ಮಂತ್ರಪಠಣ, ಫ್ಲೊಟಿಂಗ್ ಮತ್ತು ಸ್ವಿಮ್ಮಿಂಗ್,ವಿನೋದ ಕ್ರೀಡೆ,ಪೈರ್ ಕ್ಯಾಂಪ್,ಟ್ರೆಕ್ಕಿಂಗ್ ನಡೆಯಲಿದೆ.


ಎಂಟು ವರ್ಷದಿಂದ 14 ವರ್ಷದ ಮಕ್ಕಳಿಗೆ ಮಾತ್ರ ಶಿಬಿರಕ್ಕೆ ಅವಕಾಶ,ಪ್ರತೀ ಶಿಬಿರಕ್ಕೆ 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ,ಮೊದಲು ನೋಂದಾವಣೆಗೊಂಡವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ : ಎಂ.ಮಾಧವ ಗೌಡ ಕಾಮಧೇನು ಗ್ರೂಪ್ಸ್ ಬೆಳ್ಳಾರೆ ಮೊ.9448462163

NO COMMENTS

error: Content is protected !!
Breaking