ಶ್ರೀ ಹರಿಹರೇಶ್ವರ ದೇವಸ್ಥಾನದ ತೋಟಕ್ಕೆ ಹಾಗು ಕಮಲಾಕ್ಷ ದೇವರಗದ್ದೆ ಮತ್ತು ಸುಬ್ಬಮ್ಮ ದೇವರಗದ್ದೆ ಇವರ ಕೃಷಿ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆ ದಾಳಿ ಮಾಡಿ ಅಡಿಕೆ,ತೆಂಗು, ಬಾಳೆ ಗಿಡಗಳನ್ನು ಪುಡಿ ಮಾಡಿರುವ ಘಟನೆ ನಡೆದಿದೆ.

ನಿರಂತರ ಈ ಭಾಗದ ಅಲ್ಲಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ಲಗ್ಗೆಇಡುತ್ತಿದ್ದು ಈ ಬಗ್ಗೆ ಸಂಬಂದ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
