ಕಾರು ಹಾಗೂ ಬಸ್‌ಗೆ ಅಲ್ಪಸಲ್ಪ ಜಖಂ

ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಲ್ಟೊ ಕಾರೊಂದು ಕೆಎಸ್‌ಆರ್‌ಟಿಸಿ ಬಸ್ಸಿಗೆ ಗುದ್ದಿದ ಘಟನೆ ಇದೀಗ ನಡೆದಿದೆ.
ಕೊಯ್ನಾಡಿನಿಂದ ಸುಳ್ಯ ಬಸ್‌ಸ್ಟ್ಯಾಂಡಿಗೆ ಬರುತ್ತಿದ್ದ ಬಸ್ಸು ನಿಲ್ದಾಣದ ಒಳಭಾಗಕ್ಕೆ ಬರುತ್ತಿದ್ದಂತೆ ನಿಲ್ದಾಣದ ಒಳಭಾಗದಿಂದ ಬಂದ ಆಲ್ಟೊ ಕಾರು ಬಸ್ಸಿನ ಒಂದು ಬದಿಗೆ ಗುದ್ದಿದೆ. ಘಟನೆಯಿಂದ ಕಾರು ಮತ್ತು ಬಸ್ಸಿಗೆ ಅಲ್ಪಸಲ್ಪ ಜಖಂ ಗೊಂಡಿದ್ದು ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಬಸ್ಸು ನಿಲ್ದಾಣದ ಒಳಗೆ ಯಾವುದೇ ಖಾಸಗಿ ವಾಹನಗಳು ಹೋಗಬಾರದು ಎಂದು ಅಲ್ಲಿ ಬೋರ್ಡ್ ಹಾಕಿದ್ದರೂ ಕೂಡ ಬೇರೆ ಬೇರೆ ವಾಹನಗಳು ಬಸ್ಸು ನಿಲ್ದಾಣಕ್ಕೆ ಹೋಗುತ್ತಿರುವುದೇ ಈ ರೀತಿಯ ಘಟನೆಗೆ ಕಾರಣವಾಗುತ್ತದೆ ಎಂದು ನಿಲ್ದಾಣದ ಕಾರ್ಯ ನಿರ್ವಾಹಕರು ಹೇಳುತ್ತಿದ್ದಾರೆ.