ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮಾ. 23 ರಂದು ನಡೆಯಿತು.
ಮಾ. 25 ರಿಂದ ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರೋತ್ಸವ ಪ್ರಾರಂಭವಾಗಲಿದ್ದು, ಆ ಪ್ರಯುಕ್ತ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ದೇವಾಲಯದ ವಠಾರದಿಂದ ಪೆರಾಜೆ ದ್ವಾರದವರೆಗೆ ಸ್ವಚ್ಛತೆ ನಡೆಸಿದರು.
ಈ ಸಂದರ್ಭದಲ್ಲಿ ಅಗ್ನಿ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


