ಗುತ್ತಿಗಾರು: ಉಚಿತ ನವೋದಯ/ ಮೊರಾರ್ಜಿ ತರಬೇತಿ

0

ಇಬ್ಬರು ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆ

ಅರಿವು ಕೇಂದ್ರ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮಾಹಿತಿ ಕೇಂದ್ರ ಮತ್ತು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ಸಹಯೋಗದೊಂದಿಗೆ ನಡೆಯುತ್ತಿದ್ದ ಉಚಿತ ನವೋದಯ/ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ತರಭೇತಿ ಪಡೆದು
ಇಬ್ಬರು ವಿದ್ಯಾರ್ಥಿ ನವೋದಯ ಶಾಲೆಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿರುವುದಾಗಿ ವರದಿಯಾಗಿದೆ.

2024-2025 ನೇ ಸಾಲಿನಲ್ಲಿ
ದೇವಚಳ್ಳ ಗ್ರಾಮದ ಚಂದ್ರಹಾಸ ಮತ್ತು ಗಾಯತ್ರಿ ದಂಪತಿಗಳ ಪುತ್ರಿ
ಹಿತೈಷಿ ಎಚ್ ಹಾಗೂ ದೇವಚಳ್ಳ ಗ್ರಾಮದ ಪುಂಡರೀಕ ಮತ್ತು ಜಯಂತಿ ದಂಪತಿಗಳ ಪುತ್ರ
ಧೃತಿಕ್ ಯಂ ನವೋದಯ ಶಾಲೆಗೆ ಪ್ರಥಮ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು.

ಸತತ ಏಳು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸುಮಾರು 30 ವಿದ್ಯಾರ್ಥಿಗಳು ನೋಂದಣಿಗೊಂಡು ಉಚಿತ ತರಬೇತಿ ಪಡೆಯುತಿದ್ದರು.. ಗುತ್ತಿಗಾರು ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಮೋಟ್ನೂರು ಹಾಗೂ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ತರಬೇತಿ ನೀಡಿರುತ್ತಾರೆ‌.