ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಗೌರಿಪುರಂ ದೇವಸ್ಥಾನಕ್ಕೆ ಭೇಟಿ

0

ಜೀರ್ಣೋದ್ಧಾರಗೊಳ್ಳುತ್ತಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಾ. 28ರಂದು ಭೇಟಿ ನೀಡಿದರು.


ದೇವಸ್ಥಾನದವಿದ್ದ ಜಾಗದಲ್ಲಿರುವ ಕುರುಹುಗಳನ್ನು, ನೂತನವಾಗಿ ನಿರ್ಮಾಣವಾಗುತ್ತಿರುವ ಗರ್ಭಗುಡಿ, ಮರದ ಕೆತ್ತನೆ ಕೆಲಸಗಳನ್ನು ವೀಕ್ಷಿಸಿದ ಬಳಿಕ ರಾತ್ರಿ ಮಹಾಪೂಜೆಯ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿ ತೆರಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ವತಿಯಿಂದ ಅಕ್ಷಯ್ ಕೆ.ಸಿ. ಯವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಪದಾಧಿಕಾರಿಗಳಾದ ಕ್ಯಾ. ಸುಧಾನಂದ, ಕುಶಾಲಪ್ಪ ಮಣಿಮಜಲು, ಜಗದೀಶ ರೈ ತಂಬಿನಮಕ್ಕಿ, ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರು ಹಾಗೂ ರಜತ್ ಅಡ್ಕಾರ್, ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಅವಿನಾಶ್ ಕುರುಂಜಿ, ಬೆಳ್ಳಾರೆ ಎಸ್.ಸಿ.ಡಿ.ಸಿ.ಸಿ. ವ್ಯವಸ್ಥಾಪಕ ನಟರಾಜ್, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಪುರಂದರ ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.