ಪಂಜ:ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಹುಟ್ಟುಹಬ್ಬ ಆಚರಣೆ

0

ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ‘ಎಫ್’ ವಲಯ 15 ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಸದಸ್ಯರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಮಾ. 28 ರಂದು ಪಂಜ ಲಯನ್ಸ್ ಕ್ಲಬ್ ಭವನದಲ್ಲಿ ನಡೆಯಿತು.


ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ HGF ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಪಂಜ ಗ್ರಾಮ ಪಂಚಾಯತ್ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ಕೋಮಲಾಂಗಿ ಯನ್ ರವರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಪಂಜ
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ,ಹಾಲಿ ಸದಸ್ಯೆ ಶ್ರೀಮತಿ ಪೂರ್ಣಿಮಾ ದೇರಾಜೆ ಗೌರವಿಸಿದರು. ವಲಯ 15 ಭಾರತೀಯ ಜೇಸಿಸ್ ನ ZC-BUSINESS PREVILAGE CARD Area B JFD ಜಗದೀಶ್ ರೈ ಪೆರುವಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯದರ್ಶಿ HGF ಅಶ್ವಥ್ ಬಾಬ್ಲುಬೆಟ್ಟು ,ಕಾರ್ಯಕ್ರಮ ನಿರ್ದೇಶಕ ಜೇಸಿ ಅಶೋಕ್ ಕುಮಾರ್ ದಿಡುಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾರ್ಚ್ ತಿಂಗಳ ಸದಸ್ಯರ ಹುಟ್ಟುಹಬ್ಬವನ್ನು ಹಣ್ಣಿನ ಗಿಡವನ್ನು ನೀಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜೇಸಿ ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ಜೇಸಿ ತೀರ್ಥಪ್ರಸಾದ ಪಲ್ಲತ್ತಡ್ಕ ಜೇಸಿ ವಾಣಿ ವಾಚಿಸಿದರು. ಪುರಸ್ಕೃತರ ಪರಿಚಯವನ್ನು ಜೇಸಿ ಅಶೋಕ್ ಕುಮಾರ್ ದಿಡುಪೆ ಮಾಡಿದರು. ಕಾರ್ಯದರ್ಶಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.