ಕನಕಮಜಲು ಗ್ರಾಮದ ಅರಣ್ಯದ ಗಡಿಭಾಗದಲ್ಲಿ ಕೊರಂಬಡ್ಕ ಕುದ್ಕುಳಿ, ಕಾಪಿಲ, ದೇರ್ಕಜೆ, ಭಾಗಗಳಲ್ಲಿ ಕಾಡಾನೆಗಳು ಕೃಷಿ ನಾಶ ಪಡಿಸುತ್ತಿದ್ದು, ಆನೆಗಳು ಬರುವುದನ್ನೇ ತಡೆಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕನಕಮಜಲು ಗ್ರಾಮವು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಗಡಿಭಾಗವಾಗಿದ್ದು, ದೇಲಂಪಾಡಿ ಭಾಗದಿಂದ ಆನೆಗಳು ಕರ್ನಾಟಕ ಗಡಿ ಗ್ರಾಮವಾದ ಕನಕಮಜಲು ಭಾಗಕ್ಕೆ ಆನೆಗಳು ಬಂದು ಕೃಷಿಯನ್ನು ಹಾಳು ಮಾಡುತ್ತಿರುತ್ತದೆ. ಈ ಭಾಗದ ರೈತರಿಗೆ ಅಡಿಕೆ ಕೃಷಿ ತೆಂಗು, ಬಾಳೆ, ರಬ್ಬರ್ ಕೃಷಿಗಳನ್ನು ಮಾಡಲು ಆನೆಗಳು ಅಡ್ಡಿಪಡಿಸುತ್ತಿದ್ದು, ಈಗ ಬೆಳೆದು ಫಸಲು ಬರುತ್ತಿರುವ ಕೃಷಿಗಳನ್ನು ತಿಂದು ಹಾಳುಗೆಡವಿರುತ್ತದೆ. ಆದುದರಿಂದ ಕನಕಮಜಲು ಗ್ರಾಮದ ಅರಣ್ಯದ ಅಂಚಿನ ಗಡಿಭಾಗಗಳಲ್ಲಿ ಆನೆ ಕಂದಕ ನಿರ್ಮಾಣ ಮಾಡಿ ವಿದ್ಯುತ್ ಬೇಲಿ ಕರ್ನಾಟಕ ಸರಕಾರದ ಅರಣ್ಯ, ಇಲಾಖಾ ವತಿಯಿಂದ ಅಳವಡಿಸಿಕೊಡಬೇಕು.
ಈ ಬಗ್ಗೆ ಜಿಲ್ಲಾ ಅರಣ್ಯ ಸಂರಂಕ್ಷಣಾಧಿಕಾರಿ ಮಂಗಳೂರು ಇವರಿಗೆ, ಕರ್ನಾಟಕ ಸರಕಾರದ ಅರಣ್ಯ ಇಲಾಖಾ ವತಿಯಿಂದ ವಿದ್ಯುತ್ ಬೇಲಿ ಹಾಗೂ ಆನೆಕಂದಕವನ್ನು ಕನಕಮಜಲು ಗ್ರಾಮದ ಕೇರಳ ಗಡಿಭಾಗದಲ್ಲಿ ಸುಮಾರು 10 ಕಿ.ಮೀ ದೂರದವರೆಗೆ ವಿದ್ಯುತ್ ಬೇಲಿ ಅಳವಡಿಸಿಕೊಡುವಂತೆ ಅರ್ಜಿಯನ್ನು ಸಲ್ಲಿಸಲಾಗಿರುತ್ತದೆ. ಆದುದರಿಂದ ತಾವುಗಳು ಕನಕಮಜಲು ಗ್ರಾಮದ ಕೃಷಿಕರ ಭವನೆಯನ್ನು ಅರಿತು ಸರಕಾರದ ಅರಣ್ಯಾ ಇಲಾಖಾ ವತಿಯಿಂದ ಕನಕಮಜಲು ಗ್ರಾಮದ ರೈತರಿಗೆ ಆದ ಕೃಷಿ ನಷ್ಟವನ್ನು ಭರಿಸುವರೇ ಸರಕಾರದಿಂದ ಸಹಾಯಧನವನ್ನು ಮಂಜೂರುಗೊಳಿಸಬೇಕಾಗಿ ವಿನಂತಿ ಎಂದುಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಕುದ್ಕುಳಿ ಹಾಗೂ ಗ್ರಾ.ಪಂ. ಅಧ್ಯಕ್ಷೆ
ಶಾರದಾ ಉಗ್ಗಮೂಲೆಯವರ ನೇತೃತ್ವದಲ್ಲಿ ಪುತ್ತೂರು ರೇಂಜರ್ ಕಿರಣ್ ರವರ ಮೂಲಕ ಮನವಿ ಸಲ್ಲಿಕೆ ಮಾಡಲಾಯಿತು.



ಈ ಸಂದರ್ಭದಲ್ಲಿ ಗ್ರಾಮಸ್ಥರಾದ
ಹರೀಶ್ ಮೂರ್ಜೆ,
ಹೇಮಂತ್ ಮಠ, ಜಗನ್ನಾಥ ಮಾಣಿ ಮಜಲು, ನಾರಾಯಣ ಬೊಮ್ಮೆಟ್ಟಿ ಈಶ್ವರ ಕೊರಂಬಡ್ಕ, ಲೋಹಿತ್ ಕುದ್ಕುಳಿ, ವಿಶ್ವನಾಥ ಕಣಜಾಲು, ಗಂಗಾಧರ ಕಣಜಾಲು, ಲಕ್ಷ್ಮೀ ನಾರಾಯಣ ಸಾರ ಕೂಟೇಲು, ಅಚ್ಚು.ತ ಉಗ್ಗಮೂಲೆ, ತೀರ್ಥ ರಾಮ ಕುತ್ಯಾಳ, ವಿನ್ಯಾಶ್ ಕಣಜಾಲು,
ಪ್ರದೀಪ್ ಕಾಪಿಲ, ಬಾಸ್ಕರ ಉಗ್ಗಮೂಲೆ, ಅವಿನ್ ಮಳಿ, ಲತಾ ಸಾರಕೂಟೇಲು, ಪದ್ಮನಾಭ ಕೊ೦ರ್ಬಡ್ಕ, ಮತ್ತು ಸ್ಥಳಿಯರು ಉಪಸ್ಥಿತರಿದ್ದರು. ಫಾರೆಸ್ಟರ್ ರಂಜಿತಾ ಹಾಗೂ ಸಿಬ್ಬಂದಿಗಳು ಇದ್ದರು.