ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿಕೊಳ್ಳಲು ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮನವಿ

ಮುಸ್ಲಿಂ ಭಾಂದವರ ರಂಜಾನ್ ಮಾಸಾಚರಣೆಯ ಅಂತ್ಯದಲ್ಲಿ ಆಚರಿಸುವ ಈದುಲ್ ಫಿತರ್ ಹಬ್ಬ ಹಾಗೂ ಹಿಂದೂ ಭಾಂದವರ ಹೊಸ ವರ್ಷದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಮಾ. 28 ರಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಪೊಲೀಸ್ ವೃತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರು ‘ಹಬ್ಬಗಳು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು ಎರಡೂ ಧರ್ಮಗಳ ಹಬ್ಬಗಳು ಒಟ್ಟಿಗೆ ಬರುತಿದ್ದು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಮುಸಲ್ಮಾನ ಬಾಂಧವರ ಪವಿತ್ರ ಹಬ್ಬ ರಂಜಾನ್ ಹಬ್ಬವಾಗಿದ್ದು ಅದೇ ರೀತಿ ಹಿಂದೂ ಧರ್ಮದಲ್ಲಿ ಹೊಸ ವರ್ಷದ ಯುಗಾದಿ ಹಬ್ಬವು ಕೂಡ ಅಷ್ಟೇ ಪವಿತ್ರ ಹೊಂದಿರುವಂತಹ ಹಬ್ಬವಾಗಿದೆ.
ಎರಡೂ ಸಮುಧಾಯದವರು ತಮ್ಮ ತಮ್ಮ ಧಾರ್ಮಿಕ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿಕೊಂಡು ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಕೇಳಿ ಕ್ಕೊಂಡರು.
ಹಬ್ಬದ ದಿನದಂದು ಬೇರೆ ಯಾವುದಾದರು ಕಾರ್ಯಕ್ರಮಗಳು ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ರವರು ರಂಜಾನ್ ಹಬ್ಬ ಆಚರಣೆಯ ಸಂದರ್ಭದಲ್ಲಿ ಮಸೀದಿಗಳಿಗೆ ತೆರಳುವ ಮತ್ತು ಮಸೀದಿಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ನಿಯಮವನ್ನು ಪಾಲಿಸಿಕೊಳ್ಳಬೇಕು. ಬಹುತೇಕ ಮಸೀದಿಗಳು ಹೆದ್ದಾರಿ ಬದಿಯಲ್ಲಿ ಇರುವ ಕಾರಣ ರಸ್ತೆ ದಾಟುವ ಸಂದರ್ಭದಲ್ಲಿ ತಮ್ಮ ಜೊತೆಯಲ್ಲಿರುವ ಮಕ್ಕಳ ಬಗ್ಗೆ ಎಚ್ಚರ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಅಲ್ಲದೆ ಸಂಬಂಧಪಟ್ಟ ಮಸೀದಿಯವರು ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಪರಾಧ ವಿಭಾಗದ ಎಸ್ಐ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು.

ಸಭೆಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ,ವಿಜಯ್ ಹಾಲಡ್ಕ,ಎಂ ಪ್ರಶಾಂತ್ ಭಟ್,ನಂದ ರಾಜ್ ಸಂಕೇಶ್, ರವಿ, ಸುಭಾಸ್ ಕೆ ಎಸ್,ಗಣೇಶ್,ಡಾ.ಎಸ್ ರಂಗಯ್ಯ,ಕೆ ಪ್ರಭಾಕರ್ ನಾಯರ್, ಎಸ್,ಮುಸ್ಲಿಂ ಮುಖಂಡರುಗಳಾದ ಮಹಮ್ಮದ್ ಕುಂಞಿ ಗೂನಡ್ಕ,ರಶೀದ್ ಜಟ್ಟಿಪಳ್ಳ, ಮಹಮ್ಮದ್ ಇಕ್ಬಾಲ್ ಎಲಿಮಲೆ,ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಅಬೂಬಕ್ಕರ್ ಎ,ಸಾಬಿತ್ ಕೆ,ಹಾಜಿ ಅಬ್ದುಲ್ಲಾ ಜಯನಗರ,ಅಬ್ದುಲ್ ಖಾದರ್(ಅಂದು ),
ಶಾಂತಿಗರ,ನಾಸಿರ್ ಕಟ್ಟೆಕ್ಕಾರ್ಸ್,ಶಾಬಿತ್ ಕೆ ಎ,ಫೈಸಲ್,ಝಿಯಾದ್ ಕೆ ಎ,ಮೊದಲಾದವರು ಉಪಸ್ಥಿತರಿದ್ದರು.