Home Uncategorized ಮಾ. 31: ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯಶೋಧರ ನಾರಾಲು ನಿವೃತ್ತಿ

ಮಾ. 31: ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯಶೋಧರ ನಾರಾಲು ನಿವೃತ್ತಿ

0


ವಿದ್ಯಾಬೋಧಿನಿ ಅನುದಾನಿತ ಪ್ರೌಢಶಾಲೆ ಬಾಳಿಲದ ಮುಖ್ಯ ಶಿಕ್ಷಕರಾದ ಯಶೋಧರ ನಾರಾಲು ಮಾ. 31ರಂದು ನಿವೃತ್ತರಾಗಲಿದ್ದಾರೆ. ಅಜ್ಜಾವರ ಗ್ರಾಮದ ನಾರಾಲು ಮನೆತನದ ನಿವೃತ್ತ ಶಿಕ್ಷಕ ದಿವಂಗತ ವೀರಪ್ಪಗೌಡ ನಾರಾಲು ಮತ್ತು ದಿವಂಗತ ರಾಮಕ್ಕ ದಂಪತಿಗಳ ಪುತ್ರರಾಗಿರುವ ಯಶೋಧರ ನಾರಾಲುರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಪೂರೈಸಿದರು.

ಸರಕಾರಿ ಪದವಿಪೂರ್ವ ಕಾಲೇಜ್ ಸುಳ್ಯ ಇಲ್ಲಿ ಪಿಯುಸಿ ಮತ್ತು ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯದಲ್ಲಿ ಬಿಎ ಪದವಿಯನ್ನು ಪಡೆದು, ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಐಚ್ಛಿಕ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದು ಬಳಿಕ ಸರ್ವೋದಯ ಶಿಕ್ಷಕ ಶಿಕ್ಷಣ ಕಾಲೇಜು ವಿರಾಜಪೇಟೆಯಲ್ಲಿ ಬಿ.ಎಡ್ ಪದವಿಯನ್ನು ಪಡೆದರು. ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ 2 ವರ್ಷ ಗೌರವ ಶಿಕ್ಷಕರಾಗಿ, ಸುಳ್ಯದ ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 5 ವರ್ಷ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು ಅ. 17 1997ರಿಂದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಖಾಯಂ ನೆಲೆಯಲ್ಲಿ ಸಹ ಶಿಕ್ಷಕರಾಗಿ ಸೇರ್ಪಡೆಗೊಂಡು 23 ವರ್ಷಗಳ ಕಾಲ ಸಹ ಶಿಕ್ಷಕರಾಗಿ ,ಬಳಿಕ ಆ. 2020ರಂದು ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ನಾಲ್ಕುವರೆ ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ಒಟ್ಟು 35 ವರ್ಷಗಳ ಶಿಕ್ಷಕ ವೃತ್ತಿಯಿಂದ ಮಾ. 31ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಇವರ ಪತ್ನಿ ಶ್ರೀಮತಿ ಭಾನುಮತಿ ವೈ.ಎನ್ ಗೃಹಿಣಿಯಾಗಿರುತ್ತಾರೆ.

ಹಿರಿಯ ಪುತ್ರಿ ಡಾ| ಆಶಿತಾ ಎನ್.ವೈ ಎಂ.ಡಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಮಗಳು ಅನ್ವಿತಾ ಎನ್.ವೈ ಬಿ.ಡಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸುಳ್ಯ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಪ್ರಸ್ತುತ ಸುಳ್ಯ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಹಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ವಾರ್ಷಿಕೋತ್ಸವ , ಪ್ರವಾಸ, ಸಾಹಿತಿಕ ಸ್ಪರ್ಧೆಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಿರುತ್ತಾರೆ.

NO COMMENTS

error: Content is protected !!
Breaking