ಅರಂತೋಡು ಪಂಚಾಯತ್‌ನಲ್ಲಿ ನಿರಂತರ 7೦ನೇ ತಿಂಗಳ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

0

ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಕಾಂಕ್ಷಿಯ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಸ್ಪಂದನ ಗೆಳೆಯರ ಬಳಗ ಅಡ್ತಲೆ, ನಾಗರಿಕ ಹಿತ ರಕ್ಷಣಾ ವೇದಿಕೆ ಅಡ್ತಲೆ ಮತ್ತು ಸ್ವಚ್ಛತಾ ಘಟಕ ದ ಸಹಯೋಗದೊಂದಿಗೆ ನಡೆಯಿತು.

ಅರಂತೋಡು ಗ್ರಾಮ ಪಂಚಾಯತ್ ಕಳೆದ ೭೦ತಿಂಗಳಿಂದ ತಿಂಗಳ ಕೊನೆಯ ಆದಿತ್ಯವಾರದಂದು ನಿರಂತರವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಈ ತಿಂಗಳ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಅಡ್ತಲೆಯ ಸ್ಪಂದನ ಮತ್ತು ನಾಗರಿಕಾ ಹಿತ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಅರಂತೋಡಿನ ನಾಗರಿಕರು, ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಪಂಚಾಯತ್ ಮತ್ತು ಸ್ವಚ್ಛತಾ ಘಟಕ ಸಿಬ್ಬಂದಿಗಳು ಭಾಗವಹಿಸಿದ್ದರು.