Home Uncategorized ಪ್ರತಿಭಾ ವಿದ್ಯಾಲಯದಿಂದ ನವೋದಯಕ್ಕೆ 10 ಮಂದಿ ಆಯ್ಕೆ

ಪ್ರತಿಭಾ ವಿದ್ಯಾಲಯದಿಂದ ನವೋದಯಕ್ಕೆ 10 ಮಂದಿ ಆಯ್ಕೆ

0


ಈ ಬಾರಿ ಜವಾಹರ್ ನವೋದಯ ವಿದ್ಯಾಲಯಕ್ಕೆ 6 ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ 1೦ ಮಂದಿ ವಿದ್ಯಾರ್ಥಿಗಳು ಸುಳ್ಯದ ಪ್ರತಿಭಾ ವಿದ್ಯಾಲಯದಿಂದ ಆಯ್ಕೆಯಾಗಿದ್ದಾರೆ.


ಮಂಡೆಕೋಲಿನ ನಾಗೇಶ್ ಡಿ. ಮತ್ತು ರೇಶ್ಮ ಎಮ್.ಎಮ್. ದಂಪತಿಯ ಪುತ್ರ ಹಾಗೂ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಧವನ್ ದೇವರಗುಂಡ. ಅರಂತೋಡಿನ ಮರಿಯಪ್ಪ ಮಾವೋಜಿ ಮತ್ತು ವಿದ್ಯಾ ಎ.ಕೆ.ದಂಪತಿಯ ಪುತ್ರ ಹಾಗೂ ಗೂನಡ್ಕ ಮಾರುತಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಆರಾಧನ ಮಾವೋಜಿ. ಹಾಡಿಕಲ್ಲಿನ ವಾಸುದೇವ ಎಚ್. ಮತ್ತು ಸುಂದರಿ ಜಿ. ದಂಪತಿಯ ಪುತ್ರಿ ಹಾಗೂ ಹಾಡಿಕಲ್ಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಲಿಖಿತಾ ಎಚ್.ವಿ. ನೆಟ್ಟಾರಿನ ಅಲೆಕ್ಸಾಂಡರ್ ವಿ. ಮತ್ತು ಸುಕನ್ಯಾ ಎನ್. ದಂಪತಿಯ ಪುತ್ರ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಧನ್ವಿನ್ ಎ. ಕೊಂಬಾರಿನ ಪ್ರದೀಪ್ ಕುಮಾರ್ ಕೆ.ಆರ್. ಮತ್ತು ಧನಭಾಗ್ಯ ಎಮ್.ಪಿ. ದಂಪತಿಯ ಪುತ್ರಿ ಹಾಗೂ ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ವಿದ್ಯಾರ್ಥಿನಿ ನವ್ಯಶ್ರೀ. ಕಾಂಚನದ ಪ್ರಶಾಂತ್ ಎಮ್. ವಿ. ಮತ್ತು ಪ್ರತಿಭಾ ಎಮ್. ದಂಪತಿಯ ಪುತ್ರಿ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಶ್ರಾವ್ಯ ಎಮ್. ಕೋಡಿಂಬಾಡಿಯ ಸತೀಶ್ ಗೌಡ ಎ. ಮತ್ತು ವಿನೋದಾ ದಂಪತಿಗಳ ಪುತ್ರಿ ಹಾಗೂ ಉಪ್ಪಿನಂಗಡಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಿಶಾ ಎಸ್.ಕೆ. ರಾಮಕುಂಜದ ಸುರೇಶ್ ಬಿ. ಮತ್ತು ಸುಮಿತ್ರಾ ಆರ್.ಕೆ. ದಂಪತಿಯ ಪುತ್ರ ಹಾಗೂ ರಾಮಕುಂಜದ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಸಿನ್ಹಾಗ್ ಬಿ.ಎಸ್. ಕೋಡಿಂಬಾಡಿಯ ಲೀಲಾಧರ ಗೌಡ ಯು. ಮತ್ತು ರಚನಾ ಕುಮಾರಿ ಎನ್.ಬಿ. ದಂಪತಿಯ ಪುತ್ರ ಹಾಗೂ ಪುತ್ತೂರು ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿ ಅಭಯ್ ಎಲ್. ಬರಿಮಾರು ಗ್ರಾಮದ ವಿಶ್ವನಾಥ ಎಮ್. ಮತ್ತು ವಾರಿಜ ಎಮ್. ದಂಪತಿಯ ಪುತ್ರಿ ಹಾಗೂ ಶೇರ ಸರಕಾರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಮೌಲ್ಯ ಇವರುಗಳು ಈ ವರ್ಷದ ನವೋದಯ ವಿದ್ಯಾಲಯಕ್ಕೆ 6 ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಏಳು ವರ್ಷಗಳಲ್ಲಿ ಪ್ರತಿಭಾ ವಿದ್ಯಾಲಯದಿಂದ 113 ವಿದ್ಯಾರ್ಥಿಗಳು ಜವಾಹರ ಆಯ್ಕೆಯಾಗಿದ್ದಾರೆ.

ಈ ವರ್ಷದ ಎರಡನೆಯ ಆಯ್ಕೆಯಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಅವಕಾಶ ಲಭಿಸುವ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

NO COMMENTS

error: Content is protected !!
Breaking